ಪುಟ:ಜೀರ್ಣವಿಜಯನಗರಾದರ್ಶನಂ .djvu/೩೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೪ ಕರ್ಣಾಟಕ ಗ್ರಂಥಮಾಲೆ Mow ಬ ತಿದ್ದ ಮಹಾಭಾರತದ ಕಥೆಯನ್ನು ಕೇಳುತ್ತಲಿದ್ದರೂ ಈತನು ಅಪ್ಪ ರಿಂದ ತೃಪ್ತನಾಗದೆ ತೆಲುಗು ಭಾಷೆಯಲ್ಲಿಯ ಕೇಳಬೇಕೆಂಬ ಆಕೆ ಹುಟ್ಟಿತು. ಆಗ ತನ್ನ ಸಭೆಯಲ್ಲಿದ್ದ ವಿದ್ವಜ್ಜನರಲ್ಲಿ ಬ್ರಾಹ್ಮಣೋತ್ತಮ ನಾಗಿಯೂ ವಿಫಲಶಬ್ದ ಶಾಸನನಾಗಿಯ, ಸಕಲಶಾಸ್ತ್ರಜ್ಞನಾಗಿಯೂ ಇದ್ದ ನನ್ನಯ ಭಟ್ಟನೆಂಬುವನನ್ನು ಕರೆದು ತನ್ನ ಅಭಿಪ್ರಾಯವನ್ನು ತಿಳಿಸಿ ಮಹಾ ಭಾರತವನ್ನು ತೆಲುಗಿಸಬೇಕೆಂದು ಪ್ರಾರ್ಥಿಸಿದನು. ಆ ಮಹಾ ಪಂಡಿತನು ಅರಣ್ಯ ಪಕ್ಷದ ತನಕ ಬರೆದು ಮೃತನಾದನು, ಮತ್ತೊಬ್ಬ ಉದ್ದಾಮಪಂಡಿತನಾದ ತಿಕ್ಕನಸೋಮಯಾಜಿ ಎಂಬುವನು ಈ ಅರಣ್ಯ ಪಕ್ಷದ ಶೇಪವನ್ನು ಮಾತ್ರ ಬಿಟ್ಟು ವಿರಾಟಸರದಿಂದ ಪ್ರಾರಂಭಿಸಿ ಹದಿ ನೈದು ಪಕ್ಷಗಳನ್ನು ತೆಲುಗಿಸಿದನು. ಅರಣ್ಯ ಪಕ್ಷವನ್ನು ಸ್ವಲ್ಪಮಟ್ಟಿಗೆ ಭಾಷಾಂತರಿಸಿದ್ದರಿಂದ ನನ್ನಯ ಭಟ್ಟನಿಗೆ ಹುಚ್ಚು ಹಿಡಿದು ಸತ್ತನೆಂದು ತಿಳಿದು ತಾನು ಅದನ್ನು ಬರೆದರೆ ತನಗೂ ಹಾಗೆಯೇ ಆಗುವುದೋ ಏನೋ ಎಂಬ ಭಯದಿಂದ ಈತನು ಆ ಭಾಗಕ್ಕೆ ಕೈ ಹಾಕಲಿಲ್ಲ. ಆದುದರಿಂದ ಕೆಲವುಕಾಲದ ತನಕ ಆಂಧ್ರಭಾರತವು ಪೂರ್ಣವಾಗದೆ ಕೊರತೆಯಲ್ಲಿಯೇ ಇತ್ತು. ಆ ಕಾಲದಲ್ಲಿ ಬರೆಯಲ್ಪಟ್ಟ ಕೆಲವು ಓಲೆಯಗರಿಯ ಪ್ರತಿಗಳಲ್ಲಿ ವನರರವು ಅಸಮಾಗ್ರವಾಗಿಯೇ ಕಾಣಬರುತ್ತಿದೆ. ಈ ಕವಿಗೆ ಹಿಡಿದ ಭಯವೇ ಆಮೇಲೆ ಅರಣ್ಯ ಪರ ಶೇಷವನ್ನು ಬರೆದ ಯಾವಗಡ ಕವಿಗೆ ಹತ್ತಿ, ತಾನು ಅದನ್ನು ತೆಲುಗಿಸಲಪೇಕ್ಷೆಯಿದ್ದರೂ ತನ್ನ ಹೆಸರನ್ನಿಟ್ಟರೆ ನನ್ನಯ ಭಟ್ಟನಹಾಗೆಯೇ ತನಗೆ ಕೇಡುಮಡುವುದೆಂದು ಹೆದರಿ, ಉಳಿದ ಭಾಗವನ್ನು ರಾಜರಾಜನರೇಂದ್ರನಿಗೆ ಅಂಕಿತನಾಡಿ, ನನ್ನಯ ಭಟ್ಟನಹೆಸರಿ ನಿಂದಲೇ ವಿರಚಿಸಿದನು. ಈತನೂವನಸರದಲ್ಲಿ ಅರ್ಧಕ್ಕಿಂತಲೂ ಹೆಚ್ಚು ಭಾಗವನ್ನು ತಲುಗಿಸಿರುವನು. ಈತನ ಕವಿತಾಶೈಲಿಯು ಮೃದುವಾಗಿಯ ಮಧುರವಾಗಿಯೂ ಇರುವುದು, ಈಗಲೂ ಭಾರತವನ್ನು ಓದತಕ್ಕವರು