ಪುಟ:ಜೀರ್ಣವಿಜಯನಗರಾದರ್ಶನಂ .djvu/೩೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಜೀರ್ಣವಿಜಯನಗರಾದತFo ೨೫ ಲ ಅರಣ್ಯಪರದಲ್ಲಿ ಸ್ವಲ್ಪ ಭಾಗವನ್ನು ಬಿಟ್ಟು ಪಾರಯಣಮಾಡುವ ಅಭ್ಯಾಸ ವನ್ನಿಟ್ಟುಕೊಂಡೇ ಇರುವರು, ಈ ಯರಾಪಗಡ ಕವಿಗೆ ಪ್ರಬಂಧ ಪರಮೇಶ್ವರನೆಂಬ ಬಿರಿದುಇದ್ದಿತು. ರಂಗನಾಥನೆಂಬ ಕವಿಯು ರಾಮಾಯಣವನ್ನು ದ್ವಿ ಪದಕಾವ್ಯವಾಗಿ ವಿರಚಿಸಿದನು. ಕೃಷ್ಣಾಮಂಡಲದಮನ ಮೂರು ಸಂಸ್ಥಾನಕ್ಕೆ ಪ್ರಭುವಾದ ವಿಠಲರಾಜಪುತ್ರನಾದ ಬುಕ್ಕರಾಜನಿಗೆ ಈ ಕೃತಿಯು ಅಂಕಿತವಾಗಿಮಾಡ ಲ್ಪಟ್ಟಿದ್ದರೂ ಇದಕ್ಕೆ ಬುಕ್ಕರಾಮಾಯಣವೆಂದು ಯಾರೂ ಹೆಸರಿಸದೆ ರಂಗ ನಾಥರಾನಾ ಯಣವೆಂತಲೇ ರೂಢಿ ಮಾಗಿ ಹೇಳುವರು. ಭಾಸ್ಕರನೆಂಬ ಕವಿ ಯೊಬ್ಬನು ರಾಮಾಯಣವನ್ನು ಸದ್ಯಕಾವ್ಯವಾಗಿ ತೆಲುಗಿಸಿದನು. ಬಮ್ಮೊರ ಪೋತನನೆಂಬ ಕವಿಯ ಭಾಗವತವನ್ನು ಭಕ್ತಿರಸಗ್ರಧಾನವಾಗಿ ಆ೦ಧಿಕ ರಿಸಿದನು. ಇನ್ನೂ ಹಲವರು ಕವೀಶ್ವರರು ಅಕಾಲದಲ್ಲಿ ಪುರಾಣದ ಕಥೆಗ ಳನ್ನು ತೆಲುಗಿಸಿ ಕೀರ್ತಿಯನ್ನು ಪಡೆದರು. ಆ ಕಾಲದ ಮಹಾರಾಜರುಗಳು ಕವೀಶ್ವರರನ್ನು ಮನ್ನಿಸಿ ಅದರಣೆ ಯಿಂದ ಪೋಷಿಸುತ್ತಿದ್ದುದರಿಂದ ಅವರು ಪುರಾಣೇತಿಹಾಸಗಳನ್ನು ಸಂಸ್ಕೃ ತದಿಂದ ಆಂಧ್ರಕ್ಕೆ ಭಾಷಾಂತರಿಸುತ್ತಿದ್ದರು. ಆದುದರಿಂದ ಆಗಿನ ಕವಿಗಳು ಸಂಸ್ಕೃತಾಂಧ ಭಾಷೆಗಳಲ್ಲಿ ಅಸಮಾನ ಪಾಂಡಿತ್ಯವುಳ್ಳವರಾಗಿ ಕಾವ್ಯನಿ ರ್ಮಾಣಕೌಶಲ್ಯದಲ್ಲಿ ಹೆಸರುಗೊಂಡ ) ವಿಶೇಷವಾಗಿ ನೀತಿಬೋಧಕಗಳಾ ಗಿಯ ಭಕ್ತಿದಾಯಕಗಳಾಗಿ ಯ ಇರುವ ಗ್ರಂಥ ಗಳನ್ನು ಬರೆಯುತ್ತಾ ಬಂದರು. ಕೇವಲಾನಂದದಾಯಕಗಳಾದ ಕಾವ್ಯಗಳನ್ನು ತೆಲುಗಿಸಿದ ಕವಿ ಗಳಲ್ಲಿ ಶ್ರೀನಾಥನು ಮುಖ್ಯನು. ಈತನು ಶೃಂಗಾರನೈಪಧ, ಕಾಶೀಖಂಡ ಭೀಮಖಂಡ, ಮರುದ್ರಾಜಚುತ್ತೆ, ಪಂಡಿತಾರಾಧ್ಯ ಚರಿತ್ರೆ, ಶಾಲಿವಾಹನ ಸಪ್ತಶತಿ, ವೀಧಿನಾಟಕ ಹರಿವಿಲಾಸ ಮುಂತಾದ ಗ್ರಂಥಗಳನ್ನು ರಚಿಸಿ ದ್ದಾನೆ. ಇವನ ಕವಿತ್ವವು ಸಂಸ್ಕೃತ ಭೂಯಿಷ್ಟವಾಗಿಯೂ, ರಸವತ್ತಾ ಗಿಯಂ ಇರುವುದು, ಶೈಲಿಯು ಅಷ್ಟೇನೂ ಸುಲಭವಾದುದಲ್ಲ. ದಲಿ