ಪುಟ:ಜೀರ್ಣವಿಜಯನಗರಾದರ್ಶನಂ .djvu/೩೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಜೀರ್ಣವಿಜಯನಗರಾದತto ೨೯ wwwmmmmmmmmmmmm - ಢ ಗಳು ಮುಂತಾದವುಗಳ ಪ್ರಕೃತಸ್ಥಿತಿಯನ್ನು ವಾಚಕರು ಸುಲಭವಾಗಿ ತಿಳಿಯ ಬಹುದು, ಕೃಷ್ಣರಾಯರು ತಮ್ಮ ತಾಯಿಯಾದ ನಾಂಗಲಾಂಬಿಕೆಯ ಹೆಸರಿನಲ್ಲಿ ನಾಗಲಾ ಪುರವೆಂಬ ಸುಂದರವಾದ ಪಟ್ಟಣವನ್ನು ಕಟ್ಟಿಸಿದರು. ೧೫೦೦ ರಲ್ಲಿ ವಿಜಯ ನಗರವನ್ನು ನೋಡಲಿಕ್ಕೆ ಬಂದಿದ್ದ ಪೋರ್ಚು ಗೀಸ್ ನೊಬ್ಬನೂ, ಆತನ ಹಿಂದೆ ಬಂದಿದ್ದ ಪೆಯಿಕ್' ಎಂಬುವನೂ ವಿಜ ಯನಗರವನ್ನು ಹಲವಿಧವಾಗಿ ಬಣ್ಣಿಸಿರುವರು. ( ಈತನರಾಜ್ಯದಲ್ಲಿ ಒಂಭೈನೂರು ಮೈಲುಗಳ ಸಮುದ್ರತೀರವಿ ರುವುದು, ಈ ರಾಜನು ಯುದ್ಧ ಮಾಡುವುದಕ್ಕಾಗಿ ಹತ್ತು ಲಕ್ಷ ಸೈನ್ಯಗ ಳನ್ನು ಎಲ್ಲಿ ಬೇಕಾದರೆ ಅಲ್ಲಿ ಸಿದ್ದವಾಗಿರುವಂತೆ ಮಾಡಿ ಕೊಂಡಿದ್ದಾನೆ. ಈ ಸೇನೆಯಲ್ಲಿ ಅಂಜು ಸುರಕಿಯು ಒಬ್ಬನಾದರೂ ಇಲ್ಲ, ಎಂಟು ಸಾವಿರ ಆನೆ ಗಳನ್ನೂ ಐನೂರು ಕುದುರೆಗಳನ್ನೂ ಸಿದ್ಧವಾಗಿಟ್ಟು ಕೊಂಡು, ನಗರದಲ್ಲಿನ ಹುಟ್ಟುವಳಿಯನ್ನು ಅದಕ್ಕಾಗಿ ವೆಚ್ಚ ಮಾಡುತ್ತಿರುವನು ” ಅ೦ದ್ರ ಕವಿವ ಕ್ಯರ ಹೃದಯ ಕಮಲಗಳಿಗೆ ಬಾಲಾರ್ಕನಾಗಿಯ ಸಂಸ್ಕೃತಾಂಧವಿದ್ಯಾ ಭೋಜನಾಗಿಯೂ, ಮನುಚರಿತ್ರಾದಿ ಉತ್ತಮ ಗ್ರಂಥಗಳಿಗೆ ಪತಿಯಾ ಗಿಯೂ, ತನ್ನ ಉದ್ದಂಡ ಭುಳಾದಂಡವು ಮೆರೆಯಲು ತುರುಷ್ಕರ ಪಾಲಿನ ನಿಂಹಾವಲೋಕನನಾಗಿ ರಾಜ್ಯವನ್ನಾಳುವನಾಗಿಯ, ಸಮರವಿಜಯನಾ ಗಿಯ, ಆಂಧ್ರದೇಶಕ್ಕೂ ಆಂಧ್ರ ರಾಜರಿಗೂ ಆಂಧ್ರಭಾಷೆಗೂ ಒಪ್ಪವಿಟ್ಟವ ನಾಗಿಯೂ ಇದ್ದ ಶ್ರೀಕೃಷ್ಣ ದೇವನಹಾರಾಜನು ೧೫೩೦ ನೆಯ ಇಸವಿ ಯಲ್ಲಿ ಕೀರ್ತಿಶೇಷನಾದನು. ಈ ಮಹನೀಯನು ಅಸ್ತಮಿಸಿದತರುವಾಯ ಈತನಿಗೆ ಪುತ್ರ ಸಂತಾನ ವಿಲ್ಲದ್ದರಿಂದ ಈತನ ಸಹೋದರನಾದ ಅಚ್ಯುತರಾಯನು ವಿಜಯನಗದ ಸಿಂಹಾಸನವನ್ನು ಹತ್ತಿ ೧೫೩೦ ರಿಂದ ೧೫೪೦ ರ ತನಕ ಆಳಿದನು, ದುರ್ಬಲ ನಾದ ಈತನು ವಿಷಯಾಸಕ್ತನಾಗಿ ಅಂತಃಪುರವನ್ನು ಬಿಟ್ಟು ಹೊರಕ್ಕೆ ಹೊರಡದೆಯೇ ಇದ್ದುದರಿಂದ ಪ್ರಜಾನುರಾಗಕ್ಕೆ ದೂರವಾಗಿದ್ದನು.