ಪುಟ:ಜೀರ್ಣವಿಜಯನಗರಾದರ್ಶನಂ .djvu/೪೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೩೦ ಕರ್ಣಾಟಕ ಗ್ರಂಥಮಾಲೆ ಲ ಣ ಅಚ್ಚುತರಾಯನ ತರುವಾಯ ಇವನ ಸಹೋದರನಾದ ಸದಾಶಿವ ರಾಯನು ರಾಜ್ಯಾರೂಢನಾದನು. ಈತನೂ ಪರಾಕ್ರಮ ಹೀನನಾಗಿದ್ದುದ ರಿಂದ ಹೆಸರಿಗೆ ಮಾತ್ರ ಇವನು ರಾಜನಾಗಿದ್ದರೂ ಕೃಷ್ಣರಾಯನ ಅಳಿಯ ರಾಮರಾಜನೆ: ರಾಜ್ಯ ಪರಿಪಾಲನೆ ಮಾಡುತಿದ್ದುದರಿಂದ ಕೊನೆಗೆ ಇವನೇ ಅರಸನಾದನು. ಈ ರಾಮರಾಜನಿಗೂ ಬಹಮನಿ ಧೋರೆಗಳಿಗೂ ವಿರೋಧವು ಹೆಜ್ಜೆ ಹಲವು ಯುದ್ದಗಳಾದುವು. ವಿಭಾಗಗಳಾಗಿ ಒಡೆದು ಹೋಗಿದ್ದ ಭಾಮಿನೀ ರಾಜ್ಯಗಳ ಪ್ರಭುಗಳೆಲ್ಲರೂ ಏಕೀಭವಿಸಿ ೧೫೬೫ ರಲ್ಲಿ ದಂಡೆತ್ತಿ ಬಂದರು. ಭಾಮಿನಿ: ವಿಜಯನಗರ ರಾಜ್ಯಗಳಿಗೆ ತಾಳೀಕೋಟೆಯ ಹತ್ತಿರ ಫರ ವಾದ ಯುದ್ಧ ನಡೆದು ರಾಮರಾಜನು ಹತನಾದನು, ಹಿಂದುಗಳು ಸೋತು ಹೋದರು. ಹೀಗೆ ಸೋತುಹೋದ ಸೈನಿಕರು ವಿಜಯನಗರಕ್ಕೆ ಹೋಗಿ ತನ್ನ ಭಾರಾ ಪುತ್ರಾದಿಗಳನ್ನೂ ಸಾಧ್ಯವಾದಷ್ಟು ಧನಧಾನ್ಯಗಳನ್ನು ತೆಗೆ ದುಕೊಂಡು ಪಟ್ಟಣವನ್ನು ಬಿಟ್ಟು ಓಡಿಹೋದರು. ಈ ಯುದ್ಧ ಜದದ ಮೂರನೆಯದಿನ ಮಹಮ್ಮದೀಯ ಸೈನಿಕರು ಹೋಗಿ ವಿಜಯ ನಗರವನ್ನು ಧ್ವಂಸಮಾಡಿ ಘೋರ ಕೃತ್ಯಗಳನ್ನು ನಡಿಸಿ, ಕೊಳ್ಳೆ ಹೊಡೆದುಕೊಂಡು ಹೋದರು ಸುತ್ತಮುತ್ತಲೂ ಇದ್ದವರು ಊಟ ಮಾಡಿಕೊಂಡು ಪಟ್ಟಣ ವನ್ನು ಹಾಳುಮಾಡಿದರು. ಉಳಿದ ಪುರವಾಸಿಗಳು ಆ ಊರ ಬಿಟ್ಟು ತಮಗೆ ಅನುಕೂಲವಿದ್ದ ಕಡೆಗಳಿಗೆ ಓಡಿಹೋದರು. ವಿಜಯ ನಗರವು ವಿಜನಸ್ಥಾನ ವಾಯಿತು. ಆಹಾ! ಎಷ್ಟೋ ವೈಭವದಿಂದ ಹೊಳೆಯುತ್ತಿದ್ದ ಈಪಟ್ಟಣವು ಸ್ಪಲ ಕಾಲದಲ್ಲಿಯೇ ಯಾವಗತಿಗೆ ಬಂತು ? * ಜಾತಸ್ಯ ಮರಣಂಧುವಂ ?” ಎಂಬ ವಾಕ್ಯವು ಸುಳ್ಳಲ್ಲ. ಮುಂದೆ ಈ ಶಿಥಿಲ ವಿಜಯನಗರದ ಪ್ರತಿಬಂದು ಸ್ಥಳ ನನ್ನೂ ಸಮಗ್ರವಾಗಿ ನೋಡೋಣ. ಟ