ಪುಟ:ಜೀರ್ಣವಿಜಯನಗರಾದರ್ಶನಂ .djvu/೪೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

49 ಕರ್ಣಾಟಕ ಗ್ರಂಥಮಾಲೆ ಜೀರ್ಣ ವಿಜಯನಗರಾದರ್ಶ ಉತ್ತರಭಾಗ. ಈ ವಿಜಯನಗರವು ಪೂರ್ವಕಾಲದಲ್ಲಿ ವಿದೇಶೀಯರಿಂದ ಹೇಗೆ ಅಭಿ ವರ್ಣಿಸಲ್ಪಟ್ಟಿತೋ ಆ ವಿಷಯವನ್ನು ಸ್ವಲ್ಪಮಟ್ಟಿಗೆ ತಿಳಿಸಿ, ಪ್ರಕೃತದಲ್ಲಿ ನೋಟಕರಿಗೆ ಕಾಣಬರುವ ಸ್ಥಿತಿಯನ್ನು ತರುವಾಯ ಬರೆಯುವುದು ಉತ್ತ ನವೆಂದು ತಿಳಿದು ಹಾಗೆಯೇ ತಿಳಿಸಲಾಗುವುದು: - ಕ್ರಿ. ಶ. ೧೪೦೦ ರಲ್ಲಿ ಈ ದೇಶಕ್ಕೆ ಬಂದು ವಿಜಯನಗರವನ್ನು ನೋಡಿದ 'ನಿಕೊಲೋಡೆಯ ಕೊಂಟೆ' ಎಂಬ ಇಟಲಿ ದೇಶಿಯ ನೊಬ್ಬನು ಈ ನಗರದ ವೈಭವವನ್ನು ಲ್ಯಾರ್ಟ ಭಾಷೆಯಲ್ಲಿ ಹೀಗೆ ಅಭಿವರ್ಣಿಸಿ ರುವನು ವಿಜಯನಗರ ಎಂಬ ದೊಡ್ಡ ಪಟ್ಟಣವು ಬಹು ನಿಡಿದಾಗಿರುವ ಪರ್ವ ತಗಳ ಹತ್ತಿರ ಕಟ್ಟಲ್ಪಟ್ಟಿದೆ, ಆ ಪಟ್ಟಣದ ಸುತ್ತಳತೆ ಇಪ್ಪತ್ತು ಮೈಲುಗ ೪ವೆ. ಆ ಪಟ್ಟಣದಲ್ಲಿ ಆಯುಧಗಳನ್ನು ಧರಿಸಲು ಸಮರ್ಥರಾದವರು ತೊಂಬತ್ತು ಸಾವಿರ ಭಟರಿದ್ದಾರೆ. ಮತ್ತು ಆ ಪ್ರಾಂತಗಳಲ್ಲಿ ವಾಸಮಾಡುತ್ತಿ ರುವ ಜನರು ತಮ್ಮ ಇಷ್ಟಾನುಸಾರ ಬಹು ಭಾರೈಯರನ್ನು ಪರಿಗ್ರಹಿಸು ತಿರುವರು, ಅವರು ಬೇವಯಾತ್ರೆಯನ್ನು ಮುಗಿಸಿದ ತಮ್ಮ ಪತಿಯೊಂದಿಗೆ ಸುಡಲ್ಪಡುತ್ತಿರುವರು, ಅವರ ದೊರೆಯು ಹಿಂದೂಸ್ಥಾನದಲ್ಲಿರುವ ಉಳಿದ ರಾಜರಿಗಿಂತ ತುಂಬಾ ಬಲಿಷ್ಠನು, ಆತನಿಗೆ ಹನ್ನೆರಡು ಸಾವಿರಮಂದಿ ಹೆಂಡತಿ ಯರಿರುವರು. ಅವರಲ್ಲಿ ನಾಲ್ಕು ಸಾವಿರಮಂದಿ ದೊರೆಯು ಎಲ್ಲಿಗೆ ಹೋ ಗುವನೋ ಅಲ್ಲಿಗೆ ಕಾಲುನಡೆಯಿಂದ ನಡೆದು ಬರುವರು ಇನ್ನು ನಾಲ್ಕು ಸಾವಿರ ಸ್ತ್ರೀಯರು ಸುಂದರಾಲಂಕಾರ ಭೂಷಿತೆಯರಾಗಿ ಕುದರಗಳಮೇಲೆ ಕೂತುಕೊಂಡು ಹಿಂದೆ ಬರುತ್ತಿರುವರು. ಎರಡು ಮೂರು ಸಾವಿರ