ಪುಟ:ಜೀರ್ಣವಿಜಯನಗರಾದರ್ಶನಂ .djvu/೪೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೩೪ ಕರ್ನಾಟಕ ಗ್ರಂಥಮಾಲೆ ತುಂಬಾ ಸೈರಣೆಯಿಂದ ಸಹಿಸಿಕೊಂಡಿರುವರು. ಈ ಮರು ಹಬ್ಬಗಳ ಲ್ಲದೆ ಮತ್ತೊಂದು ಹಬ್ಬವು ಮೂರು ರಾತ್ರಿಗಳು ಆಚರಿಸಲ್ಪಡುವುದು. ಆ ದಿನಗಳಲ್ಲಿ ವಸಂತವೆಂಬ ಹೆಸರಿನಿಂದ ಅರಿಸಿನದ ನೀರನ್ನು ರಾಜಮಾರ್ಗ ಗಳಲ್ಲಿ ನಡೆಯುವ ಜನರಮೇಲೆ ಚೆಲ್ಲುತ್ತಿರುವರು. ಎಂದು ಬರೆದಿರುವನು, ಈ ನಿಕೋಲೋಡೆಯ ಕೊಂಟೆ ವಿದೇಶೀ ಯನಾದುದರಿಂದ ರಾಣಿಗಳ ಪರಿಚಾರಿಕೆಯರನ್ನು ಕೂಡ ರಾಜಭಾರೈಯ ರೆಂದು ಊಹಿಸಿ ತಪ್ಪು ತಿಳಿವಳಿಕೆಯಿಂದ ಹನ್ನೆರಡುಸಾವಿರ ಪತ್ನಿಯರಿರು ವರೆಂದು ಬರೆದಿರಬಹುದು, ಆತನು ತಿಳಿಸಿರುವ ನಾಲ್ಕು ಹಬ್ಬಗಳು ಯಾವು ವೆಂದರೆ-(೧) ಯುಗಾದಿಹಬ್ಬ, (೨) ದೀವಳಿಗೆ, (೩) ಮಹಾನವಮಿ ಹಬ್ಬ, (೨) ಹೋಳಿಹಬ್ಬ ವಿಜಯನಗರವು ವಜ್ರಗಳಿಗೂ ಪ್ರಸಿದ್ಧವಾಗಿರು ತದೆಂದು ಆತನು ತಿಳಿಸಿದ್ದಾನೆ. ತರುವಾಯ ೧೪೪೩ ನೇ ವರುಷದಲ್ಲಿ ( ಅಬ್ದುಲ್ ರಜಾಕ್ ” ಎಂಬಾ ತನು ವಿಜಯನಗರವನ್ನು ನೋಡಲಿಕ್ಕೆ ಬಂದು ಆ ನಗರವನ್ನು ಹೀಗೆ ವರ್ಣಿ ನಿರುವನು. “ ೧೪೪೩ ನೇ ಇಸವಿ ಏಪ್ರಿಲ್ ತಿಂಗಳ ಕೊನೆಯಲ್ಲಿ ವಿಜಯನಗರ ವನ್ನು ಪ್ರವೇಶಿಸಿದೆ. ನಮ್ಮನ್ನು ಕರೆದೆಯಾ ದಕ್ಕಾಗಿ ಪರಿವಾರ ಜನರ ನಮಗೆ ಎದುರಾಗಿ ಬಂದು ನಮ್ಮನ್ನೊಡಗೊಂಡು ಹೋದರು. ನಮ್ಮ ವಾಸಕ್ಕಾಗಿ ರಾಜನು ಸುಂದರವಾದ ಅರಮನೆಯನ್ನು ಕೊಡಿಸಿದನು. ಆತನ ರಾಷ್ಟ್ರವು ಕೃಷ್ಣಾ ನದಿಯಿಂದ ಕನ್ಯಾಕುಮಾರಿಯ ತನಕ ವ್ಯಾಪಿ ನಿದೆ ಆ ರಾಜಧಾನಿಯಲ್ಲಿ ಪರ್ವತಗಳನ್ನು ಹೋಲುತ್ತಾ ವಿಕಾರವಾದ ಆಕಾರವನ್ನುಳ್ಳ ಸಾವಿರ ಆನೆಗಳಿರುವುವು. ಇವರಲ್ಲಿ ಹನ್ನೊಂದುಲಕ್ಷ ಸೈನ್ಯವಿರುವುದು, ಈ ಕಾಲದಲ್ಲಿ ಹಿಂದೂಸ್ಥಾನದಲ್ಲಿ ಈತನಂತೆ ನಿರಂಕು ಶಾಧಿಕಾರವುಳ್ಳ ಮತ್ತೊಬ್ಬ ರಾಜನು ಯಾವನೂ ಕಾಣಿಸಲಿಲ್ಲ. ವಿಜಯ ಆಡು