ಪುಟ:ಜೀರ್ಣವಿಜಯನಗರಾದರ್ಶನಂ .djvu/೪೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಜೀರ್ಣವಿಜಯನಗರಾದಶ#೦. ೩೫ ನಗರದಂತಹ ದೊಡ್ಡ ಪಟ್ಟಣವನ್ನು ಇದುವರೆಗೆ ನಾನು ಎಲ್ಲಿಯ ಕಣ್ಣು ಗಳಿಂದ ನೋಡಲಿಲ್ಲ, ಪ್ರಪಂಚದಲ್ಲಿ ಆ ನಗರವನ್ನು ಹೋಲುವ ಮತ್ತೊಂ ದು ಪಟ್ಟಣವಿರುವುದೆಂಬುದನ್ನು ನನ್ನ ಕಿವಿಗಳಿಂದ ಇದುವರೆಗೆ ಕೇಳಲಿಲ್ಲ. ಸಸ್ಯ ಪ್ರಕಾರಗಳಿಂದ ಸುತ್ತಲ್ಪಟ್ಟ ಏಳು ದುರ್ಗಗಳಿಂದ ಸುರಕ್ಷಿತವಾಗಿ ಆ ನಗರವು ಕಂಗೊಳಿಸುತ್ತಲಿದೆ. ಮೊದಲನೆಯ ದುರ್ಗದ ಸುತ್ತಲೂ ಎತ್ತರ ವಾಗಿರುವ ಕಲ್ಲುಗಳು ಕುದುರೆಗಳಾಗಲಿ, ಭಟರ್ರಾ ಲಿ ಪ್ರವೇಶಿಸುವುದಕ್ಕೆ ಅವಕಾಶವಿಲ್ಲದಹಾಗೆ ಭೂಮಿಯಲ್ಲಿ ಅರ್ಧದಮಟ್ಟಿಗೆ ನೆಡಲ್ಪಟ್ಟಿದೆ, ಉತ್ತರ ಭಾಗದಲ್ಲಿರುವ ಏಳನೇ ದುರ್ಗವೇ ಮಹಾರಾಜರು ವಾಸಮಾಡುವ ಅಂತಃ ಪುರ ಮಂದಿರವಾಗಿದೆ. ಮೊದಲನೆಯ ದುರ್ಗದ ದಕ್ಷಿಣದ ಕೊನೆಯ ಮೊದ ಲುಗೊಂಡು ಉತ್ತರದ ಕೊನೆಯ ತನಕ ಇರುವ ದೂರ ಎಂಟುಮೈಲುಗಳು ಗಿವೆ, ಮೊದಲನೆಯ ದುರ್ಗ ಮೊದಲು ಮೂರನೆಯ ದುರ್ಗದತನಕ ಇರುವ ಪ್ರದೇಶವೆಲ್ಲವೂ ಸಾಗುವಳಿ ಮಾಡಲ್ಪಟ್ಟ ಹೊಲಗಳಿಂದ, ಗೃಹಗಳಿ೦ ದಲೂ, ಉದ್ಯಾನವನಗಳಿಂದಲೂ, ಫಲವೃಕ್ಷಗಳಿಂದಲೂ ತುಂಬಿವೆ. ಮರಿ ನೆಯ ದುರ್ಗ ಮೊದಲುಗೊಂಡು, ಏಳನೆಯದುರ್ಗದತನಕ ಇರುವ ಪ್ರದೇ ಶವೆಲ್ಲವೂ ಅಸಂಖ್ಯಾತಗಳಾದ ಜನಸಂಫುಗಳಿಂದ ತುಂಬಿ ಆಂಗಡಿಗಳಿಂದಲೂ ಪುತ್ತಿವೆ ಅರಮನೆಗೆ ಸವಿಾಪವಾಗಿ ನಾಲ್ಕು ಬೀದಿಗಳು ಒಂದಕ್ಕೊಂದು ಎದುರಾಗಿ ಸಾಲುಗೊಂಡಿವೆ. ಉತ್ತರದಿಕ್ಕಿನಲ್ಲಿ ರಾಜಮಂದಿರದದ್ವಾರಮಂ ಟಪವಿರುವುದು. ಪ್ರತಿ ಬೀದಿಯಲ್ಲಿಯ ಅಂದವಾದ ತಳಿರುಗಳಿಂದ ಕೂಡಿದ ಉನ್ನ ತಗಳಾದ ಕಮಾನುಗಳು ನಿರ್ಮಿಸಲ್ಪಟ್ಟಿವೆ. ಎಲ್ಲವುಗಳಿಗಿಂತಲೂ, ರಾಯರ ಆಸಾನಮಂಟಪವು ಅತ್ಯುನ್ನತವಾಗಿದೆ. ಬೀದಿಗಳು ವಿಶಾಲವಾಗಿಯೂ, ದೀರ್ಘವಾಗಿಯ, ರಮಣೀಯವಾಗಿಯೂ ಇವೆ. ಎಲ್ಲಾ ಕಡೆಯಲ್ಲಿಯೂ, ಗುಲಾಬಿಹೂವುಗಳು ಮಾರಲ್ಪಡುತ್ತವೆ. ಅಲ್ಲಿನ ಪ್ರಜೆಗಳು ಗುಲಾಬಿ