ಪುಟ:ಜೀರ್ಣವಿಜಯನಗರಾದರ್ಶನಂ .djvu/೪೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

(೬ ಕರ್ಣಾಟಕ ಗ್ರಂಥಮಾಲೆ m ಹೂವುಗಳನ್ನು ಆಹಾರಕ್ಕಿಂತಲೂ ಆವಶ್ಯಕವಾದವುಗಳೆಂದು ಭಾವಿಸು ತಾರೆ, ಮುತ್ತುಗಳು, ಕಂಪುಗಳು, ನೀಲಗಳು, ವಜ್ರಗಳು ಮೊದಲಾದವು ಬಹಿರಂಗವಾಗಿ ಅಂಗಡಿಗಳಲ್ಲಿ ವಿಕ್ರಯಿಸಲ್ಪಡುತ್ತವೆ. ಈ ಪ್ರದೇಶಗಳ "ಯ ರಾಜಾಂತಃಪುರಪ್ರದೇಶಗಳಲ್ಲಿಯೂ, ನಯವಾಗಿ ಹಾಲುಗಾರ ಮಾಡಲ್ಪಟ್ಟ ಕಲ್ಲಿನ ಕೊಳಾಯಿಗಳ ಮೂಲಕ ಹಲವು ಕಾಲುವೆಗಳು ಜಲ ಪೂರ್ಣವಾಗಿ ಪ್ರವಹಿಸುತ್ತಲಿವೆ. ರಾಯರ ಅರಮನೆಯ ದ್ವಾರಮಂಟಪಕ್ಕೆ ಎಡಭಾಗದಲ್ಲಿ ರಾಜನಗರಿಯಂತೆ ಇರುವ ” ದಿರ್ವಾಖಾನಾ “ ಎಂಬ ಮಂದಿ ರವಿದೆ. ಅದಕ್ಕೆ ಎದುರಾಗಿ ಒಂದು ಸಭಾಭವನವಿದೆ. ಆ ಸಭಾಭವನದ ಕೊನೆಯಲ್ಲಿ ಟೊಬೆದಾರರು ನಿಂತುಕೊಂಡು ಇರುವರು. ಆ ಸಭಾಮಂ ಟಪದ ಮಧ್ಯಭಾಗದಲ್ಲಿ ದಿವಾನನು ಕುಳಿತುಕೊಳ್ಳುವ ಪೀಠವಿದೆ. ಅಲ್ಲಿ ದಿವಾನನು ಅಥವಾ ದಂಡನಾಯಕನು ಕುಳಿತುಕೊಂಡು ಪ್ರಜೆಗಳ ಬಿನ್ನಹ ಗಳನ್ನು ವಿಮರ್ಶಿಸುತ್ತಲಿರುವನು. ಆತನ ತೀರ್ಪಿನಮೇಲೆ ಅಪೀಲೇ ಇಲ್ಲ ಕಲಸವನ್ನು ಮುಗಿಸಿದ ಮೇಲೆ ದಂಡನಾಯಕನು ಸಪ್ತದ್ವಾರಗಳನ್ನು ದಾಂಟಿ ಅಂತಃಪುರವನ್ನು ಪ್ರವೇಶಿಸಿ, ರಾಜನಿಗೆ ಎಲ್ಲವನ್ನೂ ವಿಜ್ಞಾಪಿಸುವನು. ರಾಜಮಂದಿರದ ಹಿಂದುಗಡೆ ದಂಡನಾಯಕನ ಮನೆ ಇರುವುದು, ಆ ಮನೆಯ ಎಡಪರ್ಕ್ಷದಲ್ಲಿ ನಾಣ್ಯಗಳನ್ನು ಮುದ್ರಿಸುವ ಟಂಕಸಾಲೆ ಇದೆ, ದಿವಾನ ಖಾನೆಗೆ ಎದುರಾಗಿ ಆನೆಗಳನ್ನು ಕಟ್ಟುವ ಕಟ್ಟಡ ಉಂಟು, ಅದರಲ್ಲಿ ಒಂದೊಂದು ಕೋಣೆಯಂತೆ ಏರ್ಪಾಡು ಮಾಡಲ್ಪಟ್ಟಿದೆ. ನಾಣ್ಯಗಳನ್ನು ಮುದ್ರಿಸುವ ಟಂಕಸಾಲೆಗೆ ಎದುರಾಗಿ ನಗರಪಾಲಕ (ಟವು ಮೇಜ ಓಟ್) ನ ಮನೆ ಇರುವುದು, ಆತನ ಕೈಕೆಳಗೆ ಹನ್ನೆರಡುಸಾವಿರ ಭಟ ರಿದ್ದಾರೆ. ಟಂಕಸಾಲೆಯ ಹಿಂದುಗಡೆ ಹದಿನೈದು ಗಜಗಳ ಅಗಲವುಳ್ಳ ಒಂದು ಚಿಕ್ಕ ಬೀದಿ ಇರುವುದು, ಆ ಬೀದಿಯ ಎರಡುಕಡೆಗಳಲ್ಲಿಯೂ ಮನೆಗಳ ಮುಖ್ಯ ಮಂಟಪಗಳ ಕಟ್ಟಲ್ಪಟ್ಟಿವೆ, ಅವುಗಳ ಎದುರಿಗೆ