ಪುಟ:ಜೀರ್ಣವಿಜಯನಗರಾದರ್ಶನಂ .djvu/೪೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೩೭ ಜೀರ್ಣವಿಜಯನಗರಾದಶFo www.vv.೧೧ ಸೊಗಸಾದ ಕಲ್ಲುಗಳಿಂದ ಕಟ್ಟಲ್ಪಟ್ಟ ಉನ್ನತಾಸನಗಳಿರುವುವು. ಆಯಾ ಕೊಟ್ಟಡಿಗಳ ಗೋಡೆಗಳ ಮೇಲೆ ನಿಂಹಗಳು, ಹುಲಿಗಳು, ಚಿರತೆಗಳು ಮೊದಲಾದ ಕ್ರೂರಮೃಗಗಳ ಆಕಾರಗಳು ಚಿತ್ರಿಸಲ್ಪಟ್ಟಿವೆ. ಅಲ್ಲಿರುವ ಉನ್ನತಾಸನಗಳು ರತ್ನಾಭರಣಾಲಂಕೃತೆಯರಾದ ವೇಶ್ಯಾಂಗನಾಮಣಿಯ ರಿಂದ ಅಧಿಪ್ಟಿಸಲ್ಪಟ್ಟಿವೆ. ಒಂದುದಿನ ನನ್ನನ್ನು ನೋಡುವುದಕ್ಕಾಗಿ ರಾಯರ ಅಂತಃಪುರದಿಂದ ಕಳುಹಿಸಲ್ಪಟ್ಟ ಕೆಲವರು ದೂತರು ಬಂದು ನನ್ನನ್ನು ಆ ದಿನವೇ ರಾಯರ ಆಸ್ಥಾನಕ್ಕೆ ಕರೆದೊಯ್ದರು. ರಾಜಕುಮಾರನು (ಪ್ರೌಢ ದೇವರಾಯನು) ಸಭಾಮಂಟಪದಲ್ಲಿ ರಾಜಕಾರ್ ಧುರಂಧರರಾದ ಮಂತ್ರಿ ಶಿಖಾಮಣಿಗಳು ತನ್ನ ಸುತ್ತಲೂ ಓಲೈಸುತ್ತಿರಲು ರತ್ನ ಸಿಂಹಾಸನದಲ್ಲಿ ಮಂಡಿಸಿದ್ದನು. ಆತನಿಗೆ ಎರಡು ಕಡೆಗಳಲ್ಲಿಯ ಜನರಗುಂಪು ವೃತ್ತಾ ಕಾರವಾಗಿ ನಿಲ್ಲಿಸಲ್ಪಟ್ಟಿತು. ರಾಯರು ಪಟ್ಟು ಪೀತಾಂಬರಗಳನ್ನು ಧರಿಸಿ ದ್ದರು. ತೆಳುವಾಗಿಯ, ನಿಡಿದಾಗಿಯೂ ಇರುವ ದೇಹವುಳ್ಳವನಾಗಿ ಕಪ್ಪು ಬಿಳುಪುಅಲ್ಲದ ಶ್ಯಾಮಲವರ್ಣವನ್ನು ಹೋಲುವ ರೂಪುಳ್ಳವ ನಾಗಿರುವನು. ಅವನ ಕೆನ್ನೆ ಗಳು ಮೃದುವಾಗಿಯ ತೆಳುವಾಗಿಯೂ ಇವೆ. ಆತನ ಗಡ್ಡದಲ್ಲಿ ಕೂದಲುಗಳಿಲ್ಲ. ಆತನ ದೃಷ್ಟಿಯು ಮನೋಹರವಾಗಿದೆ. ಆತನಿಗೆ ೭೦೦ ಮಂದಿ ಹೆಂಡತಿಯರೂ ಬಂಗಾರದವರೂ ಇರುವರೆಂದು ತಿಳಿ ಯಬಂತು, ಮಹಾನವಮಿಯ ಹಬ್ಬದಲ್ಲಿ ರಾಯನು (ಪ್ರೌಢದೇವರಾ ಯರು) ತನ್ನ ದೇಶದಲ್ಲಿದ್ದುಕೊಂಡು ತನಗೆ ಕಪ್ಪವನ್ನು ಕಟ್ಟುತ್ತಿರುವ ಸೇನಾಪತಿಗಳನ್ನೂ ಪ್ರಭುಗಳನ್ನೂ ತನ್ನ ಆಸ್ಥಾನಕ್ಕೆ ಬರಮಾಡಿಕೊಂಡು ದರ್ಬಾರು ನಡಿಸುತ್ತಾನೆ. ಅವರು ಬಹಳ ಮನೋಹರಗಳಾದ ಹೌದಾಗ ೪ಂದ ಅಲಂಕರಿಸಲ್ಪಟ್ಟ ಸಾವಿರ ಆನೆಗಳನ್ನು ತಮ್ಮ ಸಂಗಡ ತರುತ್ತಾರೆ. ಆದಿನ ಪಟ್ಟಣವೆಲ್ಲವೂ ಬಹು ಶೃಂಗಾರವಾಗಿ ಅಲಂಕರಿಸಲ್ಪಡು ತದೆ, ಆನೆಗಳಲ್ಲವೂ ಒಂದುಕಡೆ ಸೇರಿ ಸಮುದ್ರದ ಅಲೆಗಳಂತೆ ಕಾಣಬ