ಪುಟ:ಜೀರ್ಣವಿಜಯನಗರಾದರ್ಶನಂ .djvu/೪೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೩ಳ ಕರ್ಣಾಟಕ ಗ್ರಂಥಮಾಲೆ ರುತ್ತಿರುವುವು, ಅಲ್ಲಿ ನಾಲೆ ದು ಅಂತರಗಳನ್ನುಳ್ಳ ಚಪ್ಪರ (ಪಂದಲ') ಗಳು ನಿರ್ಮಿಸಲ್ಪಡುತ್ತವೆ. ಈ ಮೈದಾನಕ್ಕೆ ದೂರವಾಗಿ ಒಂಭತ್ತು ಚಪ್ಪ ರಗಳಿಂದ ಕೂಡಿದ ಒಂದು ಅರಮನೆಯು ನಿರ್ಮಿಸಲ್ಪಟ್ಟಿದೆ. ಅಂತಃಪು ರಕ್ಕೂ ಚಪ್ಪರಗಳಿಗೂ ನಡುವೆ ನಾಟಕದವರೂ ಹಾಡುವವರೂ ಕಥಾ ಪುರಾಣಗಳನ್ನು ಹೇಳುವವರೂ ಇರುತ್ತಾರೆ. ಬಾಜನ ಎದುರಿಗೆ ಇರುವ ತೆರೆಗೆ ಆಚೆ ಯೌವನಸ್ತ್ರೀಯರು ಸುಂದರವಸ್ತಾಲಂಕಾರಭೂಷಿತೆಯರಾಗಿ ನಾಟ್ಯವನ್ನಾಡುತ್ತಿರುವರು. ಮೂರು ದಿನಗಳು ಈ ವಿಧವಾಗಿ ಆಟಗಳಿ೦ ದಲೂ, ಹಾಡುಗಳಿಂದಲೂ, ವಿನೋದಗಳಿಂದಲೂ ಕಳೆಯಲ್ಪಟ್ಟವು, ಮರ ನೆಯ ದಿನ ನನಗೆ ಮರಳಿ ಮರಳಿ ಮಹಾರಾಯನ 'ರ್ಶನವು ಲಭಿಸಿತು. ತುಂಬಿ ವಿಶಾಲವಾದ ಸಿಂಹಾಸನವು ಸುವರ್ಣದಿಂದ ಮಾಡಲ್ಪಟ್ಟ ಅಮೌಲ್ಯ ಗಳಾದ ರತ್ನಗಳು ಕೆತ್ತಲ್ಪಟ್ಟಿವೆ, ನಿಂಹಾಸನದ ಎದುರಿಗೆ ಚದರವಾಗಿರುವ ತಿವಾಸಿಯೊಂದಿದೆ. ಅದರ ಕೊನೆಗಳಲ್ಲಿ ಮರುವರಸೆಗಳಾಗಿ ಮುತ್ತು ಗಳು ಕಟ್ಟಲ್ಪಟ್ಟಿವೆ. ರಾಜನು ಆ ಮೂರುದಿನಗಳ ಆ ತಿವಾಸಿ (ಮೆತ್ತೆ ಯಮೇಲೆ ಕುಳಿತುಕೊಂಡಿರುವನು. ಆ ಮಂದಿರದ ಗೋಡೆಗಳೂ, ಮೇಲು ಹೊದಿಕೆಯ, ಮಣಿಗಳಿಂದ ಹೊದಿಸಲ್ಪಟ್ಟ ಚಿನ್ನದ ಹಲಗೆಗಳಿಂದ ಆವರಿಸ ಲ್ಪಟ್ಟಿದೆ. ಆ ಹಲಗೆಗಳು ಬಂಗಾರದ ಮೊಳೆಗಳಿಂದ ಬಿಗಿಸಲ್ಪಟ್ಟಿವೆ. ? ಈರೀತಿಯಾಗಿ ವಿದೇಶೀಯರಿಂದ ವರ್ಣಿಸಲ್ಪಟ್ಟ ವಿಜಯನಗರವು ೧೫-೧೬ ನೆಯ ಶತಮಾನಗಳಲ್ಲಿ ತುಂಬಾ ಔನ್ನತ್ಯವನ್ನು ಹೊಂದಿತ್ತೆಂದು ಹೇಳುವುದಕ್ಕೆ ಸ್ವಲ್ಪವಾದರೂ ಸಂಶಯಗೊಳ್ಳಬಹುದೆ ? ಭಜೇನಕಾಲದಲ್ಲಿ ಇಷ್ಟು ಪ್ರಾಭವ, ವೈಭವಗಳಿ೦ದ ಒಪ್ಪು ತಿದ್ದು ಈಗ “ ಹಂಪೆಯ ವಿನಾಶ ' ಎಂಬ ಪ್ರಸಿದ್ದಿ ಯಿಂದ ಅನ್ಯದೇಶೀ ಯರನ್ನು ಕೂಡ ಆಕರ್ಷಿಸುವಂತಹ ಜೀರ್ಣವಿಜಯನಗರವನ್ನೂ ಅದರ ಲ್ಲಿನ ಪ್ರಕೃತಸ್ಥಿತಿಯನ್ನೂ ಕುರಿತು ನಾವು ಈಗ ಮುಖ್ಯವಾಗಿ ತಿಳಿದು