ಪುಟ:ಜೀರ್ಣವಿಜಯನಗರಾದರ್ಶನಂ .djvu/೪೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಜೀರ್ಣವಿಜಯನಗರಾದರ್ಶ೦ 46 ಕೂಳ್ಳಬೇಕಾಗಿದೆ. ಅಲ್ಲಿ ಈಗ ಪೂರ್ವಕಾಲದಲ್ಲಿದ್ದ ಕಟ್ಟಡ ಮುಂತಾದ ವುಗಳು ಮೊದಲಿನಂತೆ ಇಲ್ಲವಾದರೂ ಪೂರ್ವಚಾತುರವನ್ನು ತೋರಿ ಸುವ ಸಪ್ತಪತ್ರಕಾರಗಳ ಅನೇಕ ದೇವಾಲಯಗಳ ಗಣನಾತೀತಗಳಾದ ಮಂದಿರಗಳೂ ಶಿಥಿಲಗಳಾಗಿ ಬಿದ್ದಿವೆ. ಈಗಿನ ದರೋಜ, ಮಲಪನಗುಡಿ, ಕಮಲಾಪುರ, ಹಂಪೆ ಮೊದಲಾ ದುವುಗಳೆಲ್ಲವೂ ಪೂರ್ವದ ವಿಜಯನಗರದೊಳಗಿನವೇ, ಹೊಸಪೇಟೆಗೆ ಸವಿಾಪದಲ್ಲಿಯೇ ಆಗಿನ ನಾಶನಸ್ಥಳಗಳು ಕಣಬರುವುವು. ಇದು ಬಳ್ಳಾ ರಿಗೆ ೩೬ ಮೈಲುಗಳ ದೂರದಲ್ಲಿದೆ ಇಲ್ಲಿಂದ (ಹೊಸಪೇಟೆಯಿ೦) ಈಶಾನ್ಯ ದಿಕ್ಕಿಗೆ ಹೋಗುವ ಮಾರ್ಗವನ್ನು ಹಿಡಿದು ಒಂದೂವರೆ ಮೈಲು ದೂರ ನಡೆ ದರೆ ಮಾರ್ಗಕ್ಕೆ ಬಲಗಡೆ ಒಂದು ದೊಡ್ಡ ದೇವಾಲಯವು ಕಾಣಬರುವುದು ಇದು ಕೃಷ್ಣದೇವರಾಯರಿಂದ ಕಟ್ಟಿಸಲ್ಪಟ್ಟ ಅನಂತಶಯನದೇವಾ ಲಯ, ಇದರ ನಿಂಹದ್ವಾರವು ಉತ್ತರಾಭಿಮುಖವಾಗಿದೆ, ಇದರ ಪ್ರಕಾ ರದ ಗೋಡೆ ಶಿಥಿಲವಾಗಿ ಆ ಶಿಲೆಗಳು ಅಲ್ಲಿ ವಾಸಮಾಡುವ ಪ್ರಜೆಗಳ ಮನೆ ಗಳನ್ನಲಂಕರಿಸಿವೆ. ಈ ದೇವಾಲಯವು ಸ್ವಲ್ಪಮಟ್ಟಿಗೆ ತಿಥಿಲರೂಪವನ್ನು ಹೊಂದಿದ್ದರೂ ಬ್ರಿಟಿಷ್ ಸರ್ಕಾರದವರು ಅಲ್ಲಲ್ಲಿ ಸ್ವಲ್ಪ ಕಾಮಗಾರಿ ಮಾಡಿಸಿದ್ದಾರೆ. ಈ ಆಲಯವು ವಿಗ್ರಹಶೂನ್ಯವಾಗಿದೆ ಇಲ್ಲಿನ ವಿಗ್ರಹವು ಈಗ ಹೂವಿನಹಡಗಲಿ ತಾಲ್ಲೂಕು ಧೂಳಲುಗ್ರಾಮದಲ್ಲಿರುತ್ತದೆಂದು ಬ್ರಹ್ಮಶ್ರೀ ಚಿತ್ತವಾಡಿ ಹನುಮಂತಗೌಡರವರು ಬರೆದಿರುವರು. ಈ ದೇವಾಲಯದಿಂದ ರಾಜಮಂದಿರದ ಬಾಗಿಲತನಕ ಗೊಡ್ಡಮಾರ್ಗವೂ, ಅದರ ಉಭಯಶಾರ್ಶ್ವಗಳಲ್ಲಿಯ ವೃಕ್ಷಗಳ, ಅಂಗಡಿಗಳೂ ಇದ್ದುವೆಂದು ಚರಿತ್ರೆಯಲ್ಲಿ ಹೇಳಲ್ಪಟ್ಟಿರುವುದೇ ಹೊರತು ಅದರ ಗುರುತುಗಳು ಈಗ ಯಾವುವೂ ಕಾಣಬಾರವು, ಆ ಕಟ್ಟಡಗಳಲ್ಲವೂ ನೆಲಸಮನಾಗಿ ಹೋಗಿ ರಬಹುದು, ಆದರೂ ದಾರಿಯಲ್ಲಿ ಅಲ್ಲಲ್ಲಿ ವಲಯಾಕಾರವಾಗಿ ಗೋಪುರ m m ಶಿ W M