ಪುಟ:ಜೀರ್ಣವಿಜಯನಗರಾದರ್ಶನಂ .djvu/೫೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೪೨ ಕರ್ಣಾಟಕ ಗ್ರಂಥಮಾಲೆ ಯದ ಸಿಂಹಪ್ಪಾ ರದ ಮೇಲೆ ಸಾಮಾನ್ಯ ಮನುಷ್ಯನು ಕಲ್ಲೆಸೆಯಲಾರ ದಪ್ಪು ಉನ್ನತವಾಗಿರುವ ಗೋಪುರವೊಂದಿರುವುದು, ಇದು ಸ್ವಲ್ಪಮಟ್ಟಿಗೆ ಶಿಥಿಲವಾಗಿರುವುದು. ಈ ಗುಡಿಗೆ ಸ್ವಲ್ಪ ದೂರದಲ್ಲಿ ಮಾರ್ಗಕ್ಕೆ ಎಡಗಡೆ ಸುತ್ತಲೂ ಮಂಟಪಗಳುಳ್ಳ ಒಂದು ಕೊಳವಿರುವುದು, ಈಗ ಇದರಲ್ಲಿ ನೀರು ಇಲ್ಲ. ಪೂರ್ವಕಾಲದಲ್ಲಿ ಕಮಲಾಪುರದ ಹತ್ತಿರವಿರುವ ಕೆರೆಯಿಂದ ನೀರನ್ನು ತರು ತಿರಬಹುದು, ಇನ್ನೂ ಪೂರ್ವದಿಕ್ಕಿಗೆ ಹೋದರೆ ಹಾಳುಬಿದ್ದಿರುವ ಗುಡಿ ಗಳು ಅನೇಕವಾಗಿರುವುವು, ಅವುಗಳೆಲ್ಲವನ್ನೂ ನೋಡಿದಮೇಲೆ ಕಮಲಾ ಪುರದಿಂದ ಬಿಡದಿಗೆ ಹಿಂದಿರುಗಬಹುದು. ಸತ್ರದಿಂದ ಉತ್ತರಕ್ಕೆ ಡಿ, ಏ, ಡಬ ರ್ಇ ಸ್ಪೆರ್ಕ್ಟ ಬಂಗಲೆಯು ಇದೆ. ಮುಂದುಗಡೆ ಹೋಗುವ ಸೊಟ್ಟಿಯಾದ ಮಾರ್ಗದ ಮೂಲಕ “ ಹಾಳು ಪಟ್ಟಣ ” ಎಂದು ಈಗ ಕರೆಯಲ್ಪಡುವ ನಗರಮಧ್ಯಕ್ಕೆ ಹೋಗ ಬಹುದು. ಮಾರ್ಗಕ್ಕೆ ಬಲಪಾರ್ಶ್ವದಲ್ಲಿ ಸುಮಾರು 200 ಗಜಗಳ ದೂರದಲ್ಲಿ ಚಂದ್ರಶೇಖರಮಠವೆಂಬ ಬಂದು ಆಲಯವನ್ನು ಕಾಣಲಾಗುವುದು ಇದರ ನಿಂಹದ್ವಾರವು ಪೂJಾಭಿಮುಖವಾಗಿರುವುದು ಸುತ್ತಲೂ ಇರುವ ಪ ಕಾರದ ಗೋಡೆ ಶಿಥಿಲರೂಪವನ್ನು ಹೊಂದಿದೆ ; ಗರ್ಭಗೃಹಕ್ಕೆ ದಕ್ಷಿಣ ಕಡೆ ಪ್ರಕಾರದ ಎರಡು ಮಲೆಗಳಲ್ಲಿಯ, ಶಿಥಿಲಗಳಾದ ಎರಡು ಮಂಟಪಗ ೪ರುವುವು. ನಿಂಹದ್ವಾರದ ಗೋಪುರವಿದ್ದರೂ ಅದು ಅಷ್ಟು ಎತ್ತರವಾ ಗಿಲ್ಲ, ಇದರಲ್ಲಿ ವಿಶೇಷವಾದುದಾಗಲಿ ರಮ್ಯವಾದುದಾಗಲೀ ಯಾವುದೂ ಇಲ್ಲದುದರಿಂದ ಪರರಾಜರು ಅದನ್ನು ಹಾಳುಮಾಡದೆ ಬಿಟ್ಟುಬಿಟ್ಟರು. ಆದ ಕಾರಣ ಇದು ಯಥಾಸ್ಥಿತಿಯಲ್ಲಿದೆ. ಇದೂ ವಿಗ್ರಹಹೀನವಾದುದು - ಇಲ್ಲಿಂದ ಮೊದಲಿನ ಮಾರ್ಗದ ಮೂಲಕ ಪಶ್ಚಿಮಾಭಿಮುಖವಾಗಿ ಸ್ವಲ್ಪ ದೂರ ಹೋದರೆ ಅಂತಃಪುರದ ಸ್ನಾನಗೃಹವನ್ನು ನೋಡಬಹುದು.