ಪುಟ:ಜೀರ್ಣವಿಜಯನಗರಾದರ್ಶನಂ .djvu/೫೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೪೪ MMwwwnMuruwwwM ಬ ಕರ್ಣಾಟಕ ಗ್ರಂಥಮಾಲೆ ನೀರನ್ನು ತರುವುದಕ್ಕಾಗಿ ಮತ್ತೆರಡುಕಾಲುವೆಗಳನ್ನು ಈ ಹಳ್ಳಕ್ಕೆ ತಂದಿರುವರು. ಈ ಉಪಕಾಲುವೆಗಳಲ್ಲವೂ ಶಿಥಿಲರೂಪವಾಗಿಯೇ ಇವೆ. ಈ ಹಳ್ಳಕ್ಕೆ ಇಂತಹ ಕಾಲುವೆಗಳನ್ನು ತಂದಿರುವುದು ನೋಡಿದರೆ ಇದು ಸ್ನಾನದ ಹಳ್ಳವಾಗಿ ಇರಬಹುದೆಂದು ಊಹಿಸಲಾಗುವುದು, ಇದಕ್ಕೆ ಅನತಿ ದೂರದಲ್ಲಿಯೇ “ಮಹಾನವಮಿಯ ದಿಬ್ಬ” ಎಂದೆನಿಸುವ ವಿಜಯದಶಮಿಯ ಸಿಂಹಾಸನ ಬಂದಿರುವುದು. ಇದು ಸುತ್ತಲೂ ಕಲ್ಲು ಕಟ್ಟಡದಿಂದ ಮಾಡಿದ ದೊಡ್ಡಮಣ್ಣಿನ ಗುಡ್ಡ, ಆ ಕಾಲದಲ್ಲಿ ರಾಜರು ದಸರಾಹಬ್ಬದ ದಿನಗಳಲ್ಲಿ ಅದರಮೇಲೆ ಕುಳಿತು ಅರಣ್ಯ ಮೃಗವಿನೋದಗಳನ್ನೂ, ಜಟ್ಟಿಕಾಳಗಗ ಳನ್ನೂ, ಮಲ್ಲಯುದ್ಧಗಳನ್ನೂ ನೋಡುತ್ತಿರುವರು. ಅದರಮೇಲೆ ಪೂರ್ವಭಾಗದಲ್ಲಿ ಅರ್ಧದರ ಕೆಳಭಾಗದ ತನಕ ಇಳಿಯುವದಕ್ಕೆ ಎರಡು ಕಡೆಗಳಲ್ಲಿಯ ಮಾರ್ಗಗಳಿರುವುವು, ಅದರ ಕೆಳ ಭಾಗದಲ್ಲಿ ಗೋಡೆಯೊಂದಿಗೆ ಕೂಡಿದ ಬಂಡೆಯಲ್ಲಿ ಐದು ವಿಗ್ರಹ ಗಳಿರುವುವು ಅಲ್ಲಿ ಕೆಲವರು ಪಾಮರರು ಆ ವಿಗ್ರಹಗಳನ್ನು ಪಂಚಪಾಂಡ ವರೆಂದು ಭಾವಿಸಿ ಇಂದಿಗೂ ಪೂಜೆಮಾಡುತ್ತಿರುವರು. ಈ ದಿಬ್ಬದ ಪಾರ್ಶ್ವದ ಕಲ್ಲುಗಳ ಮೇಲೆ ಕುದುರೆಗಳ, ಆನೆಗಳ, ಒಂಟೆಗಳ, ಹುಲಿಗಳೂ, ಬೇಟೆಗಾರರು, ಹುಳ್ಳೆಗಳನ್ನು ತರುಬುವ ಬೇಟೆನಾಯಿಗಳು, ಆಟಗಾತಿಯರು ಮೊದಲಾದ ಚಿತ್ರಗಳು ಕೆತ್ತಲ್ಪಟ್ಟಿರುವುವು. - ಈಗ್ಗೆ ನಾಲ್ಕು ವರುಷಗಳ ಹಿಂದೆ ಈ ದಿಬ್ಬದೊಳಕ್ಕೆ ಹೊರಡುವು ದಕ್ಕೆ ಎಲ್ಲಿಯಾದರೂ, ದ್ವಾರವಿದೆಯೋ ಏನೋ ನೋಡಬೇಕೆಂದು ಆ ತಿಟ್ಟಿನ ನಾಲ್ಕು ಪಾರ್ಶ್ವಗಳಲ್ಲಿಯೂ ಸುಮಾರು ಹತ್ತು ಅಡಿಗಳ ಆಳದ ತನಕ ಅಗೆದು ನೋಡಿದರೆಂತಲೂ, ಆಗ ಕೂಲಿಯವರಲ್ಲಿ ಕೆಲವರು ಅಲ್ಲಿ ಮಡಿದದ್ದರಿಂದಲೂ, ದ್ರಾ ರವೂ ಎಲ್ಲಿಯ ಕಾಣಬಾರದ್ದರಿಂದಲೂ, ಆ ಪ್ರಯತ್ನವನ್ನು ಬಿಟ್ಟು, ಆ ಹಳ್ಳವನ್ನು, ಮರಳಿ ಹೂತುಬಿಟ್ಟರೆಂತಲೂ m