ಪುಟ:ಜೀರ್ಣವಿಜಯನಗರಾದರ್ಶನಂ .djvu/೫೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಜೀರ್ಣ ವಿಜಯನಗರಾದರ್ಶo ೪೫ ತಿಳಿಯಬಂದಿದೆ. ಇದರ ಸುತ್ತಲೂ ಒಂದು ಪ್ರಕಾರದ ಗೋಡೆಯಿದ್ದು ಈಗ ಅದೆಲ್ಲವೂ ಶಿಥಿಲವಾಗಿ ಉತ್ತರದಿಕ್ಕಿನ ಗೋಡೆ ಮಾತ್ರ ನಿಂತಿದೆ. ಈ ದಿಬ್ಬದ ಮೇಲಕ್ಕೆ ಹತ್ತುವುದಕ್ಕೆ ಪಶ್ಚಿಮದಿಕ್ಕಿನಲ್ಲಿ ಮೆಟ್ಟಲುಗಳಿವೆ. - ಈ ಸಿಂಹಾಸನದ ಪ್ರಕಾರದ ಗೋಡೆಗೆ ಉತ್ತರಪಾರ್ಶ್ವದಲ್ಲಿ ಒಂದು ದೊಡ್ಡ ಕಲ್ಲುಬಾಗಿಲು ಆನಿಸಲ್ಪಟ್ಟಿದೆ. ಇದು ಏಕಶಿಲಾಮಯ ವಾಗಿದೆ. ಇದು ಸುಮಾರು ಹತ್ತು ಅಡಿಗಳ ಎತ್ತರವೂ ಎಂಟು ಅಡಿಗಳ ಮಂದವೂ ಉಳ್ಳದ್ದು, ಇದಕ್ಕೆ ಸಾಮಾನ್ಯವಾದ ಮರದ ಬಾಗಿಲಂತೆಯೇ ಹಿಂಭಾಗದಲ್ಲಿ ಅಗುಳಿಹಾಕುವ ಎರಡು ತೂಬುಗಳಿರುವುವು. - ಇಲ್ಲಿಂದ ಈಶಾನ್ಯಕ್ಕೆ ಸುಮಾರು ಅರ್ಧ ಮೈಲು ದೂರ ಹೋದರೆ ಅಲ್ಲಿ ರಂಗಸ್ವಾಮಿಯ ದೇವಾಲಯವನ್ನು ನೋಡಲಾಗುವುದು. ಇದು ಪೂರ್ವಾಭಿ ಮುಖವಾಗಿರುವುದು. ಇದು ಬಹುಮಟ್ಟಿಗೆ ಶಿಥಿಲವಾಗಿದೆ. ಎಲ್ಲಾ ದೇಗುಲಗಳಂತೆ ಇದಕ್ಕೂ ಅಲ್ಲಲ್ಲಿ ರಿಪೇರಿ ಮಾಡಲ್ಪಟ್ಟಿದೆ. ಅರ್ಧ ಭಾಗದವರೆಗೆ ಹೂತುಹೋಗಿದ್ದುದರಿಂದ ಈಚೆಗೆ ಈ ಹೂಳುಮಣ್ಣನ್ನು ತೆಗೆದುಹಾಕಿಸಿದ್ದಾರೆ. ಇದರಲ್ಲಿ ನೋಡತಕ್ಕೆ ವಿಶೇಷಾಂಶಗಳು ಯಾವುವೂ ಇಲ್ಲ. ಈ ಆಲಯಕ್ಕೆ ದಕ್ಷಿಣಪಾರ್ಶ್ವದಲ್ಲಿ ಒಂದು ಮಂಟಪವಿರುವುದು. ಅಲ್ಲಿ ಸುಮಾರು ಹನ್ನೆರಡು ಅಂಗುಲಗಳ ಉದ್ದವಿರುವ ಆಂಜನೇಯ ಸ್ವಾಮಿಯ ಶಿಲಾವಿಗ್ರಹ ಬಂದಿರುವುದು, ಈ ವಿಗ್ರಹದ ಎದುರಿಗೆ ಅಂದರೆ ಆವರಣದ ದಕ್ಷಿಣಗೋಡೆಯ ಒಳ ಭಾಗದಲ್ಲಿ ಸುಮಾರು ಆರು ಅಡಿಗಳ ಉದ್ದವೂ, ಎರಡಡಿಗಳ ಅಗಲವೂ, ಇರುವ ಬಂಡೆಯಮೇಲೆ ಹಳಗನ್ನಡದ ಅಕ್ಷರಗಳಲ್ಲಿ ಈ ಶಾಸನವು ಕೆತ್ತಲ್ಪಟ್ಟಿರುವುದು. “ ಶಾಲಿವಾಹನಶಕೆ ೧8೩೪ ನೇ ವಿಶ್ವಾವಸು ಸಂವತ್ಸರದ ಚೈತ್ರ ಕುದ್ಧ ತದಿಗೆ ಗುರುವಾರದದಿನ ರಾಜಾಧಿರಾಜಪರಮೇಶ್ವರ ಶ್ರೀ ವೀರಪ್ರತಾಪ