ಪುಟ:ಜೀರ್ಣವಿಜಯನಗರಾದರ್ಶನಂ .djvu/೫೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಜೀರ್ಣವಿಜಯನಗರಾದರ್ಶo ೪೯ ೧AM ಕಾಳುಗಳುಳ್ಳವಾಗಿ ವಂಗವಣವುಳ್ಳ ತೆನೆಗಳಿಂದ ಕೂಡಿದ ಪೈರುಗಳು ವಿದ್ಯಾ ವಿಹೀನರಾದ ದುರ್ಜನರ ತೆರದಿಂದ ತಮ್ಮ ಲೋಪಗಳನ್ನು ತೆಳಯದೆ ಡಾಂಭಿಕ ದಿಂದ ತಲೆಎತ್ತಿ ತನ್ನ ಬೆಳ್ಳನವನ್ನೆಲ್ಲರಿಗೂ ತೋರಿಸುತ್ತಿರುವುವು ಮತ್ತು ಅಲ್ಲಿನ ಜಲಪ್ರವಾಹಗಳೂ, ಬಾಳೆ, ಮತ್ತು ಕಬ್ಬಿನತೋಟಗಳ ಅತಿಶಯವಾಗಿ ಬೆಳೆದು ನೇತ್ರಾನಂದವನ್ನುಂಟುಮಾಡುತ್ತಾ ಅಲ್ಲಿಂದ ಬೀಸುವ ಮಂದಮಾರುತವೂ ಮನಸ್ಸಿಗೆ ತುಂಬ ಉಲ್ಲಾಸವನ್ನುಂಟು ಮಾಡುತ್ತಿರುವುವು. ಆ ಹಾ ! ನಗರ ಶೋಚನೆಯು ಹೆಜ್ಜೆ, ಎಲ್ಲಿ ನೋಡಿ ದರೂ ಲತಾಕುಂಜಗಳ, ಪುಪ್ಪೋದ್ಯಾನಗಳ, ದ್ರಾಕ್ಷಾ ತಾಂಬೂಲಾದಿ ತೋಟಗಳ, ಸಮೃದ್ಧಿಯಾಗಿ ಬೆಳೆದು, ವಿವಿಧ ಕುಸುಮ ಪರಿಮಳ ಭಾರ. ವನ್ನು ವಹಿಸಿ, ವಾಯುವು ತನ್ನ ಗಂಧವ ಹನಾವವನ್ನು ಸಾರ್ಥಕಗೊಳಿಸು ವಂತೆ ಬೀಸುತ್ತಿದ್ದಾಗ ಪ್ರಾಚೀನ ಕಾಲದಲ್ಲಿ ಪ್ರಜೆಗಳು ಎಷ್ಟು ಆನಂದವನ್ನು ಹೊಂದುತ್ತಿದ್ದರೆ ಬಣ್ಣಿಸಲಾರಳವು ? ಆವನವು ಅತ್ಯಂತ ಮನೋಹರ ವಾಗಿ ಫಲಭಾರದಿಂದ ಬಾಗಿ ಭೂಮಿಯನ್ನು ಸ್ಪಶಿಸುತ್ತಾ ಹೊಸ ಪೂಗಳ ಕಾಂತಿಯುಳ್ಳ ತರುಗಳಿಂದ ಸೇವಿತವಾಗಿರುವುವು. ಅಲ್ಲಿನ ದೇವಾಲಯ ಗಳು ದಿನದಿನವೂ ಭಗವನ್ನಾಮಗಳನ್ನು ಭಜಿಸುವ ಭಕ್ತರನೆಲೆಯಾಗಿ ಅನು ದಿನವೂ ನೃತ್ಯ ಗೀತ ವಾದ್ಯಾದಿ ವೈಭವಗಳಿಗೆ ಯೋಗ್ಯವಾಗಿ ಮೆರೆಯುತ್ತಿ ರುವ ಆ ಪುಣ್ಯಭೂಮಿಯು ಭೂತಳ ಸ್ವರ್ಗವಾಗಿರುವುದೆಂದು ಹೇಳಲಿಕ್ಕೆ ಲೇಶವಾದರೂ ಸಂದೇಹ ವುಂಟೆ ? - ಇದು ಖವ್ಯಾಶ್ರಮವಾಗಿರಬಹುದೆಂದು ಹೇಳುವುದಕ್ಕೆ ಮೇಲೆ ಹೇಳಲ್ಪಟ್ಟ ಸರತಭಾಗವನ್ನು “ ಮಾತಂಗಸರತ ” ಎಂದು ಕರೆಯುತ್ತಿರು ವುದೇ ಕಾರಣವಾಗಿ ತಿಳಿಯಬಹುದು, ಮತ್ತು ಇದಕ್ಕೆ ಹತ್ತಿರುವ ಬೆಟ್ಟ ಸಾಲುಗಳಿಗೆ 'ಮಾಲ್ಯವಂತ, ಋಷ್ಯಮೂಕ, ಅಂಜನ, ” ಎಂಬ ಹೆಸರುಗಳಿರು ವುವು ಈ ಮಾತಂಗನ ಬೆಟ್ಟದ ಮೇಲೆ ಬಂದು ದೇವಾಲಯವಿರುವುದು. ನಿ