ಪುಟ:ಜೀರ್ಣವಿಜಯನಗರಾದರ್ಶನಂ .djvu/೬೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಜೀರ್ಣವಿಜಯನಗರಾದರ್ಶo ೫. MMAN ಭರಿತರಾಗಿ ಪರಿಪೂರ್ಣ ಭಕ್ತಿಯಿಂದ ಪೂಜಾದಿಗಳನ್ನು ಸಮರ್ಪಿಸಿ ವೈಭವ ವನ್ನು ಮೆರೆಯಿಸುವರು. ಈ ದೇವಾಲಯಕ್ಕೆ ಎದುರಾಗಿಯೇ ತೇರು ನಡೆ ಯಲು ಅನುಕೂಲವಾದ ವಿಶಾಲರಮಣೀಯವಾದ ವೀಧಿಯೊಂದಿರುವುದು. ಇದಕ್ಕೆ ಎರಡು ಕಡೆಗಳಲ್ಲಿಯ ಅಚ್ಚುತಸ್ವಾಮಿಯ ದೇವಾಲಯಕ್ಕೆ ಎದು ರಾಗಿರುವಹಾಗೆ ಕೈಸಾಲೆಗಳಿರುವುವು, ಉತ್ತರಪ್ರಾಕಾರದಲ್ಲಿ ವಾಸಪ್ಪ ತೀರ್ಥವಾದ ತುಂಗಭದ್ರೆಗೆ ಹೋಗುವ ಮಾರ್ಗವಿರುವುದು, - ಶ್ರೀ ವಿರೂಪಾಕ್ಷೇಶ್ವರ ದೇವಾಲಯದಿಂದ ಪೂರ್ವಕ್ಕೆ ಸುಮಾರು ಆರು ಫರ್ಲಾಂಗುಗಳ ದರಾ ನಡೆದುಹೋದರೆ ಶ್ರೀ ಕೋದಂಡರಾಮಸ್ವಾ ಮಿಯ ದೇವಾಲಯವು ಸಿಕ್ಕುವುದು. ಇದು ಉತ್ತರಾಭಿಮುಖವಾಗಿರು ವುದು, ಇದರಲ್ಲಿರುವ ಶ್ರೀ ಸೀತಾ ರಾಮ ಲಕ್ಷ್ಮಣ ವಿಗ ಹಗಳು ಅತಿಮ ನೋಜ್ಞಗಳಾಗಿರುವುವು. ಶ್ರೀ ರಾಮ ಲಕ್ಷ್ಮಣರು ಧನುರ್ಬಾಣವಾಣಿಗೆ ೪ಾಗಿ ಸೀತೆಯೊಂದಿಗೆ ನಿಂತಿರುವ ವಿಗ್ರಹಗಳು, ಪೂಜಾರೋಗ್ಯಗಳಾದ ಈ ವಿಗ್ರಹಗಳನ್ನು ನೋಡುವ ಜನರಿಗೆ ಕೂಡಲೇ ಭಯ ಭಕ್ತಿ ವಿನಯ ಸಂಭ ಮಗಳು ಉದ್ಭವಿಸುವುದಲ್ಲದೆ ರಾಮನ ಕಲ್ಯಾಣಗುಣಗಣಗಳು ಅಸದೃಶ ಗಳೆಂತಲೂ, ಅಗಣ್ಯಗಳೆಂತಲ ಸೀತೆಯ ಪತಿಭಕ್ತಿಯ ಅಪ್ರತಿಮವಾದು ದೆಂತಲೂ, ರಾಮ ಲಕ್ಷ್ಮಣರ ಸೌಭಾತವು ಸರ್ವಜನ ಸ್ತುತಿಪಾತ್ರವೆಂ ತಲೂ ಸ್ಫೂರ್ತಿಸದೆ ಇರದು. ಈ ನೀತಾ ರಾಮ ಲಕ್ಷ್ಮಣರಿಗೆ ಈಗಲೂ ನಿರಾತಂಕವಾಗಿ ಪೂಜೆಗಳು ಜರುಗುತ್ತಿರುವುವು. ಇಲ್ಲಿಯೇ ಚಕ್ರತೀರ್ಥವೆಂದು ಕರೆಯಲ್ಪಡುವ ತುಂಗಭದ್ರೆಯು ಪ್ರವಹಿಸುತ್ತಿರುವುದು, ಇಲ್ಲಿ ರುವ ಬಂಡೆಗಳ ಮೇಲೆ ಅನೇಕ ವಿಗ್ರಹಗಳ ಆ ವಿಗ್ರಹಗಳಿಗೆ ನಮಸ್ಕರಿಸುವ ಭಕ್ತರ ವಿಗ್ರಹಗಳ ಕೆತ್ತಲ್ಪಟ್ಟರು ವುವು ಇಲ್ಲಿ ತುಂಗಭದ್ರಾ ನದಿಯು ಚಕ್ರಾಕಾರವಾಗಿ ಪ್ರವಹಿಸುತ್ತಿರು ವುದರಿಂದ ಇಲ್ಲಿಯ ಜಲಕ್ಕೆ ಚಕ್ರತೀರ್ಥವೆಂಬ ಹೆಸರು ಬಂದಿದೆ.