ಪುಟ:ಜೀರ್ಣವಿಜಯನಗರಾದರ್ಶನಂ .djvu/೬೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೫೮ ಕರ್ಣಾಟಕ ಗ್ರಂಥಮಾಲೆ ಇಲಿಂದ ಪೂರ್ವದಿಕ್ಕಿಗೆ ಸುಮಾರು ಆರು ಫರ್ಲಾಂಗುಗಳ ದೂರಾ ಹೋದರೆ ಗುಡ್ಡದಮೇಲೆ ಇರುವ ಶ್ರೀ ವಿಠಲಸ್ವಾಮಿಯ ದೇವಾಲಯವು ಕಾಣಬರುವುದು, ಇದು ಶ್ರೀ ವಿದ್ಯಾನಗರದ ಪೂರ್ವದಿಕ್ಕಿನಲ್ಲಿ ತುಂಗಭದ್ರಾ ನದಿಯ ಓರೆಯಲ್ಲಿ ಕಟ್ಟಲ್ಪಟ್ಟಿರುವುದು, ಈ ದೇವಾಲಯವು ಒಬ್ಬ ರಾಜನ ಕಾಲದಲ್ಲಿಯೇ ಕಟ್ಟಲ್ಪಟ್ಟುದಲ್ಲ, ಕೃಷ್ಣದೇವರಾಜರು ವಿಷ್ಣು ಭಕ್ತಿ ಪರಾಯಣರಾಗಿ ಇದನ್ನು ಕಟ್ಟಿಸಲಾರಂಭಿಸಿದರೆಂದು ಹೇಳುತ್ತಾರೆ. ಈ ದೇವಾಲಯದ ಸಿಂಹದಾ ರವು ಪೂರ್ವಾಭಿಮುಖವಾಗಿರುವುದು, ಗರ್ಭಾಲ ಯದ ಎರಡು ಪಾರ್ಶ್ವಗಳಲ್ಲಿಯೂ ಇರುವ ಮಂಟಪಗಳ ಶಿಲ್ಪಿಕಳಾನೈಪು ನ್ಯವನ್ನು ಹೊಗಳಲು ಸಾವಿರ ನಾಲಿಗೆಗಳಾದರೂ ತೀರದು. ಏಕ ಶಿಲಾಮ ಯವಾಗಿ ಒಂದೊಂದು ಕಲ್ಲು ಕಂಭದಲ್ಲಿ ಹದಿನಾರು ಕಂಭಗಳು ವಿಂಗಡಿ ಸಲ್ಪಟ್ಟು, ಅವುಗಳಲ್ಲಿ ನಾನಾ ವಿಧವಾದ ವಿಗ್ರಹಗಳು ಸಹಿತ ಕೆತ್ತಲ್ಪಟ್ಟರು ವುವು ದೇವಾಲಯದ ಛಾವಣಿ ಕೂಡ ಶಿಲಾಮಯ ವಾಗಿ, ಅರುನ ಶಿಲ್ಪ ಕೆಲಸಗಳನ್ನು ನೋಡಿದರೆ ಆ ಕಾಲದಲ್ಲಿನ ಶಿಲ್ಪ ಕೆಳಾವಿಜ್ಞಾನದ ಔನ್ನತ್ಯ ವನ್ನು ಸಾರಿ ಹೇಳುವಂತಿರುವುದು, ದೇವಾಲಯದ ಹೊದಿಕೆ .. ಸೂರುಗ ೪೦ದ ಮೂಲೆಗಳಲ್ಲಿ ಜೋಲಾಡುತ್ತಿರುವ ಕಲ್ಲಿನ ಸರಪಣಿ/ಗಳಿಗೆ ದೀಪದ ಬಟ್ಟಲುಗಳನ್ನು ತಗುಲಿಸುತ್ತಿದ್ದರಂತೆ. ಈಗ ಈ ಸರಪಣಿಗಳು ಮಾತ್ರ) ಕಾಣಬರುವುವು. ಆ ದೇವಾಲಯವು ಉಳಿದ ದೇವಾಲಯಗಳಂತೆಯೇ ಶಿಲಾ ಮಯನಿಕ್ಕಿ ತವಾದುದು, ಕಬ್ಬಿಣವಾಗಲಿ, ಮರವಾಗಲಿ, ಮೊಳೆಗಳಾಗಲಿ ಇಲ್ಲ ದೆ ಸಿಕ್ಕಿಸಲ್ಪಟ್ಟಿರುವುದನ್ನು ನೋಡಿದ ಜನರು ಆತ್ಮರನಿಮಗ್ನಮಾನಸ್ಕರಾ ಗದೆ ಹೋಗಲಾರರು, ಚೆನ್ನಾಗಿ ಪರಿಶೀಲಿಸಿ ನೋಡಿದರೆ ಈ ಆಲಯವು ಸಂಪೂರ್ಣ ವೈಭವದಿಂದಿದ್ದಾಗ ಮಾಳಿಗೆಗೂ ಕಂಭಗಳಿಗೂ ವಿವಿಧಗಳಾದ ಬಣ್ಣಗಳನ್ನು ಎಳೆಯುತ್ತಿದ್ದಂತೆ ಗುರುತುಗಳು ಕಾಣಬರುತ್ತಿವೆ. ಇಂತಹ ಆಶ್ಚಯ್ಯ ನಿರ್ಮಾಣವನ್ನು ಹೊಂದಿ, ಸುತ್ತಲೂ ದೀಪಮಾಲೆಯು ತೇಜ ST)