ಪುಟ:ಜೀರ್ಣವಿಜಯನಗರಾದರ್ಶನಂ .djvu/೬೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ଟ ಜೀರ್ಣವಿಜಯನಗರಾದರ್ಶo ಒmmmmmmm ಸೃನ್ನು ಪಸರಿಸುತ್ತಿರಲು, ವಾದ್ಯಘೋಷವು ನಭೋಂತರಾಳವನ್ನು ತುಂಬು ತಿರಲು ಪರಮ ವೈಭವದಿಂದ ಒಪ್ಪುತ್ತಿದ್ದ ಕಾಲದ ಸಾಯಂ ಸಮಯಗಳು ಹೀಗಿದ್ದು ವೋ ಊಹಿಸಲಸಾಧ್ಯವು, ಈಗ ಈ ದೇವಾಲಯವು ವಿಗ್ರಹಹೀನ ವಾಗಿದೆ. ವಿಜಯನಗರವು ಶತ್ರುವಶವಾದಾಗ ಮಹಮ್ಮದೀಯರ ಮೂಲಕ ಹಾಳುಮಾಡಲ್ಪಟ್ಟು ದಲ್ಲದೆ ಈಜೇಚೆಗೆ ನಿಕ್ಷೇಪ ದ್ರವ್ಯಗಳು ಇರುವುವೆಂಬ ಭ್ರಾಂತಿಗೊಂಡ ಬೈರಾಗಿಗಳಿ೦ದ ಅಲ್ಲಿರುವ ವಿಗ್ರಹಗಳೆಲ್ಲ ಸೆಳ್ಳಗಿಸಲ್ಪಟ್ಟ ರುವುವು, ಪೂರ್ವದ ಸ್ಥಿತಿಯನ್ನು ಊಹಿಸಿ ಪ್ರಕೃತದ ಹೀನಸ್ಥಿತಿಯನ್ನು ನೋಡಿದರೆ ಎಂತವನಿಗಾದರೂ ಮನಸ್ಸಂತಾಪ ಉಂಟಾಗದೆ ಇರದು ಪ್ರಾಕಾರಮಧ್ಯದಲ್ಲಿ ಶಿಲಾಮಯವಾದ ಕಲ್ಲಿನ ಗಾಲಿಗಳು, ಈಚು, ಮಕಿಮರಗಳು, ಇವುಗಳನ್ನುಳ್ಳ ತೇರೊಂದಿರುವುದು. ಆ ರಥದ ಸುತ್ತಲೂ ಸೈಯ ರು ಗಿಳಿಗಳ ಮೇಲೆ ಕುಳಿತುಕೊಂಡು ಗಿಳಿಗಳು ಎಳಿಯತಕ್ಕೆ ರಥಗಳನ್ನು ನಡಿಸುತ್ತಿರುವಂತೆ ಕೆತ್ತಲ್ಪಟ್ಟು ಮುದ್ದಿನ ಮಟೆಯನ್ನು ಕಟ್ಟುತ್ತಿರುವುವು. ಈ ತೇರಿಗೆ ಪೂರ ದಿಕ್ಕಿನಲ್ಲಿ ಕಲ್ಲಿನ ಬೃಂದಾವನವೊಂದಿರುವುದು, ಈ ದೇವಾಲಯಕ್ಕೆ ಮೂಡಣ ಭಾಗದಲ್ಲಿ ತಳವಾರನ ಕಟ್ಟೆಯೂ ಇದೆ. ಅಲ್ಲಿಂದ ಗ್ರಾಮದವರೆಗೂ ಕಲ್ಲಿನ ಚಪ್ಪಡಿ ಗಳನ್ನು ಹಾಸಿರುವ ವಿಶಾಲವಾದ ರಸ್ತೆಯ ಒಂದು ಮೈಲಿತನಕ ವ್ಯಾಪಿಸಿ ರುವುದು. - ಈ ದೇವಾಲಯವನ್ನು ಬಿಟ್ಟು ಪರಾಭಿಮುಖವಾಗಿ ತಳವಾರನ ಕಟ್ಟೆಯಿಂದ ಹೋಗಿ ನದಿಯ ಒರೆಯಲ್ಲಿಯೇ ಇರುವ ಖುಷಿಗಳ ಸಮಾಧಿ ಗಳು ಒಂಭತ್ತನ್ನು ನೋಡಿ ಅವುಗಳಿಗೆ ಪೂಜಾಸತ್ತಾರಗಳನ್ನು ಮಾಡ ಬಹುದು. ಈ ಆವರಣದ ಆಚೆ ಹೊಸದಾಗಿ ಕಟ್ಟಲ್ಪಟ್ಟ ಒಂದು ದೇವಾಲ ಯವಿರುವುದು, ಈ ಆಲಯವನ್ನು ಕುರಿತು ಒಂದು ಕಥೆಯನ್ನು ಹೇಳು ವರು.-ಆನೆಗೊಂದಿಸಂಸ್ಥಾನದ ಈಚಿನ ರಾಜರುಗಳಲ್ಲೊಬ್ಬನು ವೇಶ್ಯಾ