ಪುಟ:ಜೀರ್ಣವಿಜಯನಗರಾದರ್ಶನಂ .djvu/೭೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ܘܧ ಕರ್ಣಾಟಕ ಗ್ರಂಥಮಾಲೆ 9 0 ಪ್ರಿಯನಾಗಿ ಅವರೊಂದಿಗೆ ಅಲ್ಲಿ ವಾಸಮಾಡಿಕೊಂಡಿದ್ದನಂತೆ. ಆಸ್ಥಳವನ್ನು ಬಿಟ್ಟು ಹೋಗೆಂದು ಅವನಿಗೆ ಎಷ್ಟೆಷ್ಟೋ ಕನಸುಗಳು ಬಿದ್ದರೂ ಅವನು ಅವುಗಳನ್ನು ಲಕ್ಷ್ಯ ಮಾಡದೆ ಅಲ್ಲಿಯೇ ಇದ್ದು ಬಿಟ್ಟನಂತೆ ಬಂದುದಿನ ಆ ನದಿಯ ಎರಡು ದಡಗಳಲ್ಲಿಯೂ ತುಂಬಿ ನೀರು ಹರಿಯುತ್ತಿದ್ದಾಗ ಆ ರಾಜನು ತನ್ನ ಪ್ರಯಾಂಗನೆಯರೊಂದಿಗೆ ಆಚಿನ ತಡಿಯಲ್ಲಿರುವ ಆನೆ ಗೊಂದಿಗೆ ಹೋಗುತ್ತಿರುವಾಗ ದೋಣಿ ಮು ಮುಳುಗಿಹೋಗಿ, ಅದರಲ್ಲಿ ದ್ದವರೆಲ್ಲರೂ ಜಲಸಮಾಧಿಯನ್ನು ಹೊಂದಿದರಂತೆ ? - ಇಲ್ಲಿ ತುಂಗಭದ್ರಾ ನದಿಯು ಸ್ವಲ್ಪ ತಿಟ್ಟಿನಮೇಲೆ ಪ್ರವಹಿಸುತ್ತಿರು ವುದರಿಂದ ನದಿಯು ಆಳವಾಗಿ, ಬೇಸಗೆಯಕಾಲದಲ್ಲಿ ಒಂದು ದಡದಿಂದ ಮತ್ತೊಂದು ದಡಕ್ಕೆ ಗಾರಾಳವಾಗಿ ಹೋಗಬಹುದು, ಈ ಭಾಗದಲ್ಲಿ ನದಿಯ ಬಂಡೆಯಮೇಲೆ ಪ್ರವಹಿಸುತ್ತಿರುವುದು, ಆ ಬಂಡೆಯಮೇಲೆ ಹಲ ಪ್ರವಾಹಐಾತದಿಂದ ತೋಡಲ್ಪಟ್ಟ ಬಿಲಗಳ ಅಸಂಖ್ಯಾತಗಳಾಗಿವೆ. ಈ ವಿಚಿತ್ರಗಳನ್ನು ನೋಡುತ್ತಾ ನದಿಯನ್ನು ದಾಂಟ ನೈಜಾವರ ರಾಜ್ಯದಲ್ಲಿ ರುವ ಆನೆಗೊಂದಿಯನ್ನು ಸೇರಬಹುದು, ಇಲ್ಲಿ ಶ್ರೀಕೃಷ್ಣದೇವರಾಯರ ಸಂತತಿಯವರಾಗಿ ಮೃದುಮಧುರಸ್ಸ ರಗಳನ್ನುಳ್ಳ ಶ್ರೀರಾಜರಂಗದೇವರಾ ಯರು ಈಗ ವಾಸವಾಗಿರುವರು. ಈ ಗ್ರಾಮದಲ್ಲಿ ಶ್ರೀರಂಗನಾಥ ಸ್ವಾಮಿಯ ದೇವಾಲಯವಿರುವುದು, ಈ ದೇವಸ್ಥಾನದಲ್ಲಿ ದೇವರಪೂಜೆ ಗಳು ಕ್ರಮವಾಗಿ ಜರುಗುತ್ತಲಿರುವುವು. ಆನೆಗೊಂದಿ ಗ್ರಾಮಕ್ಕೆ ಪೂರ ದಿಕ್ಕಿನಲ್ಲಿ ಸುಮಾರು ಒಂದು ಮೈಲು ದೂರದಲ್ಲಿ ಮಾರ್ಗಕ್ಕೆ ಎಡ ಭಾಗದಗುಡ್ಡದಲ್ಲಿ ಒಂದು ದೊಡ್ಡ ಗವಿ ಇರು ವುದು, ದೀಪದ ಸಹಾಯದಿಂದ ಒಳಗೆ ಪ್ರವೇಶಿಸಿ ನೋಡಿದರೆ ಇದರಲ್ಲಿ ಎರಡು ವಿಗ್ರಹಗಳು ಕಾಣಬರುವುವು, ಅಲ್ಲಿ ವಾಲಿಯು ತಪಸ್ಸು ಮಾಡು ತಿದ್ದನೆಂತಲೂ, ಆತನ ತಸಕ್ಕೆ ರಂಗನಾಥನು ಪ್ರತ್ಯಕ್ಷನಾದನೆಂತಲೂ ಒಂದು ಗಾಧೆಯುಂಟ , ಇದನ್ನು ಗವಿರಂಗ ನಾಯಕನೆಂದು ಹೇಳುವರು.