ಪುಟ:ಜೀವಂಧರ ಚರಿತೆ.djvu/೧೦೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಭಾಸ್ಕರಣಏರಚಿತ ಕುಂಭಿಣೀಶರ ಸಭೆಯೊಳಗೆ ಎ | ಬೃಂಭಿಸುವ ತೂರತ್ರಯವನೇ || ನೆಂಬೆ ವೃಷನುಗ್ಗಡಣೆ ಭರತನ ಪಟುಮಹಾರವಕೆ | ತುಂಬುರರ ಸಂಗೀತವೂರ್ವಶಿ | ರಂಭೆಯಾಡುವ ನೃತ್ಯಕಿದು ಪ್ರತಿ | ಬಿಂಬವಾಯ್ತನಲಿಂತಿದನು ವರ್ಣಿಸುವನಾರೆಂದ || ೫೯ ವರರ ಸಂಸ್ಥಾಪನೆಯ ಹಸ್ತಾ | ದ್ವುರುತರಾಕ್ಷಿ ಪ್ರಸರದಾಪರಿ | ಪರಿಯ ಚಿತ್ರದ ಸಾತ್ವಿಕಾಂಗದ ಸುಗತಿವಿಭ್ರಮದ || ಸ್ಥಿರ ವಿಷಮ ಸಮಕರಣ ಲಯ ಗತಿ | ತಿರುವ ಕುಸುರಿ ಕಳಾಪಗಳಲಾ | ತರುಣಿಯರು ಕೀರ್ತಿಸಿಯೇ ಮೆಚ್ಚಿಸಿದರು ಮಹಾಸಭೆಯ || ೬೦ ಲಲಿತವೀಣಾವಾದ್ಯರವ ಕೋ | ಮಲಮೃದಂಗಧ್ವನಿ ನಟವ್ರಜ | ದುಲುಹು ತಾಳದ ಘೋಷ ಕಹಳಾರಾವ ಗೀತರವ | ಸುಲಲಿತದಿ ನರ್ತಿಸುವ ಕಾಂತಾ | ವಳಿಯ ಕಂಕಣನೂಪುರಧ್ವನಿ | ಯೊಲವಿನಿಂದು ಅತಿ ಮುತ್ತಿ ಮುಸುಕಿತು ಚಾರುಚಪ್ಪರವ | ೬೧ ಚಾರುಸ್ವರ್ಗದ ಸೌಖ್ಯವೋ ಸಂ | ಸಾರಫಲವೋ ವಿತತಕಾವ್ಯದ | ಸಾರವೋ ನೂತನಲಸತ್ಸುಧೆಯೋ ರಸಾವಳಿಯೋ || ವಾರಿಧಿಯೊ ತ್ರೈಲೋಕ್ಯಸಾರಾ || ಸಾರವೋ ತೂರತ್ರಯದ ವಿ | ಸ್ವಾರಮೇಳಾಪಪ್ರಸೌಖ್ಯವ ಹೊಗಚ್ಚಿನಾರೆಂದ || ೬೨)