ಪುಟ:ಜೀವಂಧರ ಚರಿತೆ.djvu/೧೦೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಭಾಸ್ಕರರವಿರಚಿತ ತರುಣಿಯನು ಶೃಂಗಾರದನುಪಮ | ಸರಣಿಯನು ಸೌವರ್ಣಮಯಕಂ | ಡರಣೆಯನು ನವದಿವ್ಯಸೌಗಂಧದ್ರವೂರಿತದ || ಭರಣಿಯನು ರತಿಪತಿಯ ವಿಲಸ | ತ್ಕರಿಣಿಯನು ಮುಗ್ಗೆಯನು ದೃಗ್ವಿತ | ಹರಿಣಿಯನು ವರ್ಣಿಸುವನಾರವನೀಶ ಕೇಳೆಂದ | ೧೪ - ಗಾಣಿಯನು ಮೃದುವಾಣಿಯನು ಶುಕ | ವಾಣಿಯನು ಕಾಳಾಹಿಸ ಭ | ವೇಣಿಯನು ಕಲ್ಯಾಣಿಯನು ಕಂದರ್ಪನೊಲಿದಡರ್ವ | ಏಣಿಯನು ಸೌಂದರ ಚಿತಶ | ರ್ವಾಣಿಯನು ಘನವೃತ್ತವುಳಿನ | ಶೋಣಿಯನು ಸೌಜಾಣೆಯನು ವರ್ಣಿಸುವನಾರೆಂದ | ೧೫ - ಸ್ಥಿರದ ವಿದ್ಯುಲ್ಲತೆಯೊ ಮುಗಿಯದ | ಸರಸಿಜವೊ ಅಗಲದ ರಥಾಂಗವೊ | ಮೊರೆಯದಳಿಗಳೂ ಕಣನವಿಲ್ಲದ ಮಣಿಯೊ ಸೌಗಂಧ || `ಬೆರಸಿದನುಪಮಚಂಪಕಿ ನೆರೆ | ಕರಗದಿಂದುವನಾಯುತಂಗಜ | ವಿರಚಿಸಿದನೆನಲೆಸೆದಳಾಸತಿಯರಸ ಕೇಳೆಂದ || ಗಿಳಿಯಾಗದೆಳಗೊಂಬೊ ಪಿಕವೆಂ | ಜಲಿಸದೊಪ್ಪುವ ತಳಿರೋ ಷಟ್ಟದ | ನಿಲುಕದುತ್ಸು ಪ್ರಸನವೊ ಕಂತುಮುದ್ರಿಸದ | ಅಲಗೆ ಬಳಸದ ಸುಧೆಯೊ ಬೇಗಡೆ | ಗಳೆಯದನುಸಮರ ವೋ ಎನ | ಲಳಿಕುಳಾಳಕಿಯೆಸೆದಳವನೀಪಾಳ ಕೇಳೆಂದ | ೧೭ ಸುದತಿಯಾಸ್ಯ ಶರೀರ ದೃಕ್ಕು ಚ | ವಿಧು ತಟಿಲ್ಲತೆ ಕುಮುದ ಚಕ್ರಗ | ಟೊದವಿ ಬೆರಸಲು ತಿಳಿಯಲರಿದೆಂದವಕೆ ಕುಲುಹುಗಳ || ಪದುಮಭವನು ಕಳಂಕನಚಿರಾ || ಸ್ಪದವ ಕೇಸರಪಕ್ಷಗಳ ಮಾ | ಡಿದನೋ ತಾನೆನಲಬಲೆಯನು ವರ್ಣಿಸುವನಾರೆಂದ || ೧೮ ೧೬ ೧೭