ಪುಟ:ಜೀವಂಧರ ಚರಿತೆ.djvu/೧೦೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಜೀವಂಧರ ಚರಿತೆ ଟିଟି ಸರಸಮುದ್ರವ ದಾಂಟಲುಟಿದಾ | ದರಿಗೆ ಗೋಚರವಲ್ಲ ಲಕ್ಷ್ಮಿ | ವರಗೆ ತಾನೆದೆಯುದ್ದವಾಯ್ತಜನಾಸ್ಯಪರಿಯಂತ | ಹರಗೆ ಶಿರ ಮುಳುಗಿದುದೆನಲು ಹುಲು | ನರರ ಪಾಡೇನೆಂದೆನುತಲಿ | ತರದೊಳೊದಲದುವೆದೆ ಬಿರುದಿನ ಕಹಳೆಯೊಗ್ಗಿನಲಿ ! ೨೯ ಲಲಿತ ಚಮರದ ಸೀಗುರಿಯ ಕೋ | ಮಲೆಯರೊಪ್ಪುವ ಕೇಳಮೇಳದ | ಲಲನೆಯರು ಹಾವುಗೆಯ ಹಡಪದ ಗಿಂಡಿಯಬಲೆಯರು | ಹೊಳೆವ ಮುಕುರದ ಗೀತರುವ ಪರಿ | ಮಳದ ಕಾಂತೆಯರಾಮೃಗಾಕ್ಷಿಯ | ಬಳಸಿ ಬಂದುದು ಲಕ್ಷ ಸಂಖ್ಯೆಯ ಬಹುವಿಲಾಸದಲಿ | ೩೦ ಕರದ ಕಂಕಣಸೂಡಗಂಗಳ | ಕೊರಲ ತಿಸರದ ತೋಳ ಬಂದಿಯ | ಬೆರಲ ಮಣಿಮುದ್ರಿಕೆಯ ಕರ್ಣದ ಮುತ್ತಿನೋಲೆಗಳ | ಚರಣದಂದುಗೆಗಳ ಲಸಾ | ಸುರದ ಜಘನದ ಕಾಂಚಿಗಳ ಸಡ | ಗರದಿ ಮಹಿಳಾನಿಕರ ಬಂದುದು ಸತಿಯ ಬಳಸಿನಲಿ || ೩೧ ಮೆರೆವ ಕಂಕಣ ತೋಳ ಬಂದಿಯ | ತಿರುಹುತಮಲಾಪಾಂಗರುಚಿಗಳ | ನಿರದೆ ಬೀಳುತ ಬಿಡುಮುಡಿಯನೆಡಗಲ್ಲೋಳೊಂದಿಸುತ || ಜರಿದ ನಿಜಗಳನೊಡರಿಸುತ ನೂ | ಪುರದ ದಸಿಗೆಯ್ಯುತ್ತಲತಿ ಸಡ | ಗರದೊಳ್ಳೆ ತರುತಿರ್ದರಬಲೆಯರರಸ ಕೇಳೆಂದ | ವಿಲಸದೇಕಾವಳಿಯನೊಲವಿಂ | ದಳವಡಿಸುತಳಕಗಳ ಸೆಟ್ಟುಗು | ರ್ಗಳಲಿ ತಿದ್ದುತ ಕಲಶಕುಚಕೊಂದಿಸುತ ಮೇಲುದನು || ಲಲಿತತನುಸೌರಭವ ದೆಸೆದೆಸೆ | ಗಳಲಿ ಬೀಯುತ ನೆರೆದ ವಿಟಸಂ | ಕುಳಕೆ ಸೋಲವನೀಯುತರುತಿರ್ದರಬಲೆಯರು | ೩೧ ೩೨. 4೩