ಪುಟ:ಜೀವಂಧರ ಚರಿತೆ.djvu/೧೦೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಜೀವಂಧರ ಚರಿತ ೧೦೧ ನಡೆಗೆ ಹಂಸಗಳೊಂದಿದುವು ಮೆ | ಲ್ಕುಡಿಗೆ ಕೀರಗಳಲುಕಿದುವು ಸರ | ಗುಡಲು ಪಿಕ ಮೋಹಿಸಿತು ಮುಖಚಂದ್ರಗೆ ಚಕೋರಗಳು | ಅಡಸಿದುವು ತಾ ಸೌರಭಕೆ ಬಂ | ದಿಡಿದ ಮಧುಪವ್ರಜದ ಘನರಾ | ಯಡಿಗೆ ಕಾಂತೆಯರಳವಳಿದು ನಡೆದರು ನವಾಯಿಯಲಿ || ೩೯ - ಎಸೆವ ಭೂಚಾಸದ ಕಟಾಕ್ಷದ | ವಿಶಿಖೆಗಳ ಬಾಸೆಗಳಡಾಯುಧ | ನೊಸಲ ತಿಲಕದ ಹರಿಗೆಹಲಗೆಯ ತೋಳ ಲೌಡಿಗಳ 11, ನಿಶಿತನಖದಲಗುಗಳ ದಂತ | ಪ್ರಸರ ಮಧುರ ವಚಸ್ತ್ರ ನಿಚಯದಿ | ಕುಸುಮಬಾಣನ ಸೇನೆ ನಡೆದುದು ಸತಿಯ ಬಳಸಿನಲಿ || ೪೦ ಗುರುಕುಚದ ಮದದಂತಿಗಳ ಘನ | ತರನಿತಂಬದ ತೇರುಗಳ ದೃ | ಗೈರಚಪಲಗತಿಯಶ್ವಗಳ ನಿಗುರುಳ ಜಲ್ಲರಿಯ || ಭರದ ವೇಣೀಧ್ವಜದ ತುಂಬಿಯ | ಸರದ ಕಹಳೆಯ ನೂಪುರಝಣ | ತರದ ವಾದ್ಯದಿ ನಡೆದುದಂಗಜಸೈನ್ಯವೊಗ್ಗಿ ನಲಿ ||

  • ಭರದಿ ಯೋಗೀಶ್ವರರ ಮೇಲು | ಬೃರಿಸಿ ದೃಗ್ದಾಣಗಳಲೆಸೆದಪ ||

ಹರಿಸಿ ತಪಸಿವಾತಕಳಕದ ಬಲೆಯನಳವಡಿಸಿ | ನೆರೆದ ಎಟಸಂತತಿಯ ನಖಭೀ | ಕರದ ಸುರಗಿಯಲಣರುತತಿವಿ | ಸ್ವರದಿ ಕಾಮನ ಸೇನೆ ನಡೆದುದು ಸತಿಯ ಬಳಸಿನಲಿ || - ಪ್ರಿಯನ ಮುನಿಸತಿಗಿತ್ತ ಶಚಿ ಗೋ | ಪಿಯರಿಗೀಶನನಿತ್ಯ ಸಿರಿ ಗಂ | ಗೆಯನು ಪತಿಯ ಶಿರಕ್ಕೆ ತಂದುಮೆ ಧವನು ಗುರುಸತಿಗೆ || ಬಯಸಲಿಕೆ ರೋಹಿಣಿಯು ಪಾಟಿಯೆ | ದಯಿತೆಯರಿಗೆಂದಂಗಭವನಾ | ಕೆಯ ಮಹಾರೂಪಾತಿಶಯವನು ಹೊಗೆ ೪೧ ೪೨ ೪೩