ಪುಟ:ಜೀವಂಧರ ಚರಿತೆ.djvu/೧೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಜೀವಂಧರ ಚರಿತ ಭೂತಬಲಿಮುಸಿ ಪುಷ್ಪದಂತ | ಖ್ಯಾತರುಜ್ವಲವೀರಜಿನಸೇ | ನಾತಿಶಯರಕಳಂಕಕವಿಪರಮೇಷ್ಠಿ ಸೂರಿಗಳು | ಪೂತಚರಿತಸಮಂತಭದ್ರರ | ಜಾತರೆನಿಸುವ ಕುಂಡಕುಂದಾ | ದ್ಯಾತಿಶಯದಾಚಾರರೀಗೆಮಗಮಳಸುಖಸದವ || ಘೋರಭವವಾರಾಶಿತೀರೋ | ತಾರರ ಯರಚಲಘನಕಾಂ || ತಾರವಿಪಿನಕುಠಾರರನುಪಮರಮಳ[ಗುಣಯುತರು | ಮಾರಹರರುರುವಾದಿಗಜಕಂ | ಠೀರವರು ತಾವೆನಿಪ ಪೂರ್ವಾ | ಚಾರಿಯರು ಕಾರುಣ್ಯದಿಂದೆಮಗೀಗೆ ಸನ್ನತಿಯ || ೧೦ - ನೆಟ್ಟುಗೊಂಡನಕಾಷ್ಠಮದಗಳ | ಕಟ್ಟಿ ಪರವಾದಿಗಳ ಗೆಲಿದೆ | ೬ಟ್ಟಿ ಜಿನಧರ್ಮವನು ಸಂಸ್ಥಾಪಿಸಿ ಭವಾಟವಿದು || ಸುಟ್ಟ ಘವನೊಡಮೆಟ್ಟಿ ಕಾಮನೆ | ಸಿಟ್ಟೆಲುವ ಮುರಿದಚಳಿತನ ಮನ | ಮುಟ್ಟಿ ನೆನೆವೆನು ಏಮಳಪಂಡಿತದೇವಮುನಿವರನ || ಸಾರಜೈನಾಚಾರಪಾರಾ || ವಾರವರ್ಧನಚಂದ್ರನಘಮದ | ವಾರಣೇಂದ್ರಮೃಗೇಂದ್ರನುರುಭವಾಬ್ದದಿವಸೇಂದ್ರ | ಮಾರಮಾಘಸಟರ ಘನಸಂ | ಸಾರವಿಪಿನಕುಠಾರ ಧೀರ ಕು | ಮಾರಸೇನಮುನೀಂದ್ರನೆಮಗೊಲಿದೀಗೆ ಸುಚರಿತವ | - ದುರಿತಗಳನೊಡನೆಟ್ಟ ಗುಣಗಳ | ಧುರಿಸಿ ಕಾಮನ ಕಾರ್ಮುಕವ ಕ | ತರಿಸಿ ಪುಸ್ತಕಕೆಸೆವ ಕಂಪಿಯ ರಚಿಸಿ ಸದ್ಗುಣವ | ಭರದಿ ದಾರವ ಮಾಡಿ ಧರಿಸಿದ | ವರರತಿಯ ಜತಿದಚಳಿತನ ಸು | ಸ್ಥಿರದಿ ನೆನೆವೆನು ವರ್ಧಮಾನಮುನೀಂದ್ರಚಂದ್ರಮನ || ೧೩ ೧೧ ೧.