ಪುಟ:ಜೀವಂಧರ ಚರಿತೆ.djvu/೧೧೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಜೀವಂಧರ ಚರಿತ ೧of ಇಳೆಯ ಪತಿ ಕೇಳಿಂತು ಕುವರನ | ಮುಳಿದು ಬೇಡೆಂದೊದಲುತಿರೆ ಕೆಲ | ಕೆಲರು ತಪ್ಪೇನೆಂದು ಕೆಲರಪಹಾಸ್ಯಕರವೆಂದು || ಕೆಲರಿದೇಕೆಮಗೆಂದು ಕೆಲರು | ಜ್ವಲಸುಭದ್ರಾಕಾರನಾಕೊ | ಮಲೆಯನೊಲಿಸುವನೀತ ವೀಣೆಯೊಳೆಂದುದಖಿಳಜನ || ಗರುವ ಗತಿಗಳೊಳಿಂತು ಜೀವಂ | ಧರನು ಬರೆ ಕೆಳದಿಯರು ಕಂಡೀ | ಪುರುಷ ರೂಪಾನ್ವಿತನು ವೀಣಾಭಿಜ್ಜನಿವನಾಗೆ || ವರಸುವರ್ಣಕೆ ದಿವ್ಯಪರಿಮಳ | ಬೆರಸಿದವೊಲಂಗನೆಯ ಭಾಗ್ಯವ | ನವರಾರೆಂದೀಕಿ ಸುತಿರ್ದರು ಸುಲೀಲೆಯಲಿ|| - ನುತಸುವೀಣಾದ್ಯಖಿಲಕಲೆಯಲಿ | ಚತುರರಹ ಭೂಮಿಾಶ್ವರರು ತ | ತೃತಿಯ ವೀಣೆಯೊಳೊಲಿಸಲಾಜದೆ ನಾಣಿ ಮಗುರೆನೆ || ಮತಿವಿಕಳನೀಪರಡಗಿದುವೇ | ವಿತತಿ ಚಿನ್ನ ತಿಕೋಲು ತನಗೆಂ | ದತಿಶಯದಿ ನಗುತಿರ್ದುದಾಜನವರಸ ಕೇಳೆಂದ || ತಿರುಗಿ ಕಂಡವನಿಪರು ನಗುತೀ || ಪರದ ವಿಭ್ರಾಂತನೊ ಜಡನೆ ಬಾ | ಹಿರನೂ ಮೂರ್ಖನೊ ಮೇಣು ನರವೇಷದ ಸುರೇಶ್ವರನೋ || ವರಸುಲಕ್ಷಣನಿವನ ಭಾಗ್ಯವ | ನವರಾರಂಗಜನ ವಿರಹದಿ | ಮರುಳಿದೇನಾಶ್ಚರ್ಯವೆಂದುಸಿರ್ದುದು ನೃಪಸ್ತೋಮ || ೧೦ ನೆರೆದ ಜನವಸಹಾಸ್ಯವಾಡು | ತಿರಲು ಸೈರಿಸಿ ನಿಮ್ಮ ಕೃಪೆಯಿಂ | ದಿರದೆ ವೀಣೆಯ ಜಯಿಸಿ ಕಾಂತೆಯ ಸೆಳೆದು ತಹನೆಂದು || ವರಕುಮಾರಲಲಾಮ ನಸುನಗೆ | ವೆರಸಿ ವೀಣಾಮಂಟಪಕೆ ಬಂ | ದರುಹಗಲಗಿ ಕರಾಬ್ಬದಿಂ ತುಡುಕಿದನು ವೀಣೆಗಳ | ೧೧