ಪುಟ:ಜೀವಂಧರ ಚರಿತೆ.djvu/೧೧೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೧೦ ೧೩ ಭಾಸ್ಕರಕವಿರಚಿತ ಇದಕೆ ತಂತ್ರಿಯ ದೋಷವುಂಟೆಂ | ದಿದಕೆ ಖಡ್ಡಿ ಯದೋಷ ಹೊಂದಿಹು | ದಿದಕೆ ಕಳೆಗಳ ಕೊರತೆ ಹೊಂದಿಹುದಿದಕೆ ತಾನದಲಿ || ಪುದಿದಿಹುದಿನಿತು ದೋಷವೆಂದಿರಿ || ಸಿದ ವಿಪಂಚೀವ್ರಜವನುದಾ | ಚದುರ ಘೋಷವತಿಪ್ರವೀಣೆಯ ಕಂಡು ರಾಗಿಸಿದ | ೧೨ ಸಂಭ್ರಮದೊಳಾಘೋಷವತಿಯೆಂ | ದೆಂಬ ವೀಣೆಯ ಧರಿಸಿ ತಂತ್ರಿಯ | ನಿಂಬಿನಿಂದಳವಡಿಸಿ ಪರಿಕಿಸಿ ತಾನಮಾನಗಳ | ಬೆಂಬಂತಿಯೊಳಂದೆಸೆವ ಕಲೆಗಳ | ತುಂಬಿ ನಾನಾ ರಾಗದಲಿ ಜಿತ | ಶಂಬರಸಮಾಕಾರ ಬಾಜಿಸಿದನು ಸುಜಾಣೆ ಯಲಿ || ೧೩ - ವಕ್ತ ಹೃದಳ ನಾಭಿ ಶಿರ ದೃಕ್ | ಶೋತ್ರ ದ ಪಂಚಮ ವೃಷಭತತಿ | ವಿಸ್ತರದ ಗಾಂಧಾರ ಷಡ್ಡನಿನಾದ ಧೈವತದ || ರಕ್ತಿಯಿಂದೆಸೆವಬಿಳಕಳೆಗಳ | ಯುಕ್ತಿಸಂಚಕಗಳನು ಕ್ರೌಂಚ | ಷೋಕ್ತಿಯ ಸ್ವರವೆಸೆಯೆ ಬಾಜಿಸಿದನು ಸುಗಾನದಿ (?) !! ೧೪. ಕುಶಲತೆಯೊಳಾವೀಣೆಯನು ನವ | ರಸಿಕ ಬಾಜಿಸಿ ಪಾಡಲಲ್ಲಿಗೆ | ಪಶು ಮೃಗಾವಳಿ ಬಂದು ಕಿವಿಗೊಟ್ಟಾಲಿಸುತ್ತಿರಲು | ಒಸೆದು ಮೇಲಣ ಸುರರು ನೆರೆ ಕೀ | ರ್ತಿಸಲು ನೆರೆದ ಸಭಾಜನವ ಪರ | ವಶದೊಳಿರ್ದುದು ಗಾನಸೌಖ್ಯದೊಳಾಕುಮಾರಕನ || - ಪರಮಹರ್ಷೋತ್ಕರದೆ ವೈಶ್ಯರು | ನೆರೆದು ಕುಣಿಕುಣಿದಾಡೆ ವಿದ್ಯಾ | ಧರರು ಪೂಮಲಗಯತೆಯೆ ಸುರದುಂದುಭಿಗಳಳ್ಳಿರಿಯ || ಅರರೆ ಭಾಪುರೆ ಸಕಳವಿದ್ಯಾ | ಭರತ ಗಾನಾಭಿಜ್ಞ ಜಿತಶಂ | ಬರನೆ ಮಝಭಾಸೆಂದು ಹೊಗಟ್ಟುದು ವಂದಿಸಂದೋಹ || ೧೬ ೧೫