ಪುಟ:ಜೀವಂಧರ ಚರಿತೆ.djvu/೧೨೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಜೀವಂಧರ ಚರಿತೆ ೧೧೫ ತರುಣಿಸಹಿತ ಕುಮಾರ ಮಣಿಏ | ಸ್ಟುರಿತ ಮೆಟ್ಟಕ್ಕಿಯನು ಮೆಟ್ಟಿಸೆ | ಕರದಿ ಜೀರಿಗೆಬೆಲ್ಲವನು ತಾಳ್ಮೆಸೆವ ಶುಭಲಗ್ನ !! ನೆರೆ ತಳೆಯಲಾಬಟಕ ವಾಣಿಜ | ವರನು ಜೀವಂಧರಗೆ ಧಾರೆಯ | ನೆಹಿತದನಾವೈ ಶ್ವೇಂದ್ರ ವೈವಾಹಿಕ ವಿಧಾನದಲಿ || ೩ ಸ್ಮರನು ರತಿ ದಿವಿಜೇಂದ್ರ ಶಚಿ ಹಿಮ | ಕರನು ರೋಹಿಣಿ ಎಷ್ಟು ಸಿರಿ ಶಂ | ಕರ ಭವಾನಿ ವಿರಿಂಚಿ ವಾಕೃತಿಗೂಡಿ ಬಾಜ್ವಂತೆ | ಸ್ಥಿರದೊಳಿರಿ ನೀವೆಂದು ಸತಿಯರು | ಹರಸಿ ಮಣಿಮಯ ಸೇಸೆಯಿಕ್ಕಲು | ವಿರಚಿಸೆ ಧರಾಮರರು ಪಾಣಿಗ್ರಹಣಕೃತ್ಯಗಳ | ೩೮ ಲಲಿತಶಾಸ್ತ್ರಕ್ರಮದಿ ಹೋಮಂ | ಗಳನು ಬೇಳಿದ ಬಳಿಕ ವಿಪ್ರಾ | ವಳಿಯ ಭೂಕನ್ಯಾದಿದಾನಂಗಳಲಿ ಸತ್ಕರಿಸಿ || ಆಲನರ್ಚಿಸಿ ನಾಕಬಲಿ ದಿ | ಗೃಲಿ ಸುಶಾಂತಿಗಳಾದಿ ಕೃತ್ಯಂ | ಗಳನು ನಾನಾವಿಭವದಲಿ ವೈಶೃಂದ್ರ ಮಾಡಿಸಿದ. ೩2 ಬಳಿಕ ಗಂಧೋತ್ಸಟನು ದಂಪತಿ | ಗಳನು ಮುದದಿ ಗೃಹಪ್ರವೇಶವ | ನೊಲಿದು ಶುಭದಿವಸದಲಿ ಮಾಡಿಸಲಾವಧೂವರರು || ಲಲಿತಸುಕಲಾವಿಧದಿ ಭೂಮಿಪ | ತಿಲಕಜೀವಂಧರನು ಸಂತಸ | ಗೋಳುತ ರಮಿಸುತ್ತಿರ್ದನಭಿನವಕಾನಂದದಲಿ | ೪ರಿ