ಪುಟ:ಜೀವಂಧರ ಚರಿತೆ.djvu/೧೨೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೧೬ ಭಾಸ್ಕರಕವಿರಚಿತ ಇದು ವಿನಮದಮರೇಂದ್ರ ಶ್ರೀಜಿನ | ಪದಕಮಲಷಟ್ಟರಣ ವಾಣೀ | ವದನದರ್ಪಣ ಭೂಸುರೋತ್ತಮ ಬಸವಣಾಂಕಸುತ || ಚದುರ ಭಾಸ್ಕರರಚಿತ ಧರ್ಮ || ಪ್ರದನ ಜೀವಂಧರನ ಚರಿತೆಯೊ | ಆದುವೆ ವೈವಾಹಪ್ರವರ್ಣನೆಯರಸ ಕೇಳೆಂದ || ಒಂಬತ್ತನೆಯ ಸಂಧಿ ಮುಗಿದುದು. ಹತ್ತನೆಯ ಸಂಧಿ ೪೧. ಸೂಚನೆ|| ವರಶುನಕನೊಲವಿಂದೆ ಸದ್ದತಿ | ವಿರಚಿಸಿಯೆ ನೃಪತಿಲಕ ಜೀವಂ | ಧರನು ಗುಣಮಾಲೆಯನು ಪರಿಣಯವಾದನೊಲವಿನಲಿ || - ಧಾರಣೀಪತಿ ಕೇಳು ಕಾಷ್ಠಾ॰ | ಗಾರ ಚೈತ್ರದೊಳೊಂದು ದಿನ ಪರಿ | ವಾರ ನಾರೀಜನ ಸಹಿತ ಜಲಕೇಳಿಗೊಲವಿನಲಿ | ವಾರಿಜಾಕರಕೈದೆ ಒಟಕ ಕು | ಮಾರಮಣಿ ಜೀವಂಧರನು ೨ | ಸ್ವಾರದಿಂ ತಾ ಒ೦ದನಾಮಿತ್ರರು ಸಮೇತದಲಿ || ರಾಜಹಂಸಾನ್ನಿತದಿ ನಭವನು | ರಾಜಸಭೆಯನನಂತಪದ್ಯ ವಿ | ರಾಜಿತದಲಹಿಪಾಚ್ಯುತರ ಕುಮುದೋತ್ರದಲಿ ಶಶಿಯ || ರಾಜನನು ವರಪುಂಡರೀಕ | ಭಾಜಿತದೊಳಡವಿಯನು ದಿಗ್ಗಜ | ರಾಜನನು ನೆರೆ ಪೋಲ್ಕುದಾನದಿಯರಸ ಕೇಳೆಂದ | ಹರಿಸಮೇತದೊಳಿಂದಿರೆಯ ಕೇ | ಸರದಿ ಸಿಂಹವನಬ್ಬದಿಂದಂ | ಬರವ ಭುವನೌಘದೊಳಜಾಂಡವನನಿಮಿಷಾನ್ನಿತದಿ | ಸುರವರವ ಚಕ್ರದಿಂ ವರೂಥವ | ನುರುಶಿಲೀಮುಖದಿಂ ಧನುರ್ಧರ | ವರರವೊಲು ನೆಳತಿ ಮೆತಿದುದಾನದಿಯರಸ ಕೇಳೆಂದ | ೨