ಪುಟ:ಜೀವಂಧರ ಚರಿತೆ.djvu/೧೨೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಜೀವಂಧರ ಚರಿತ ೧೧೭ 34 ಆನದಿಯ ತೀರದಲ್ಲಿ ವಿವಿಧವಿ | ಧಾನದಲಿ ಯಜ್ಞವನು ವಿಪ್ರರು | ಸಾನುರಾಗದೊಳೆಸಗುತಿರಲು ಹವಿಸ್ಸನುರವಣಿಸಿ || ಶ್ಯಾನನೊಂದೆಂಜಲಿಸ ಕೋಪಕ್ಕೆ | ಶನ ಪಟನೆಗೆಯಿ, ಡಾಣೆಯೋ | ೪ಾನೆರೆದ ವಟುನಿಕರ ಹೇಸದೆ ಹೊಯ್ದ ರಾಶುನನ | ದುರುಳರಿಂದಡೆಗೆಡಹೆ ಭಷಕನು | ಧರಣಿಯೊಳು ಬಸವದು ತನು ಒ| ರ್ಜರಿತವಾಗಿಯೆ ತನಿಗರುಳ ನೆರೆ ಕಾಯ' ಕಣ್‌ ಮರಳೆ | ಹರಣವನು ಬಿಡುತಿರಲು ಜೀವಂ | ಧರನು ಕಂಡತದಯೆಯೋಳಕಟಾ | ಬಲದೆ ಕೊಂದರು ಪಾಪಿಗಳು ಹಾಯೆನುತ ಹರಿತಂದ || ಭರದಿ ಬಂದು ಕುಮಾರ ನಾನಾ | ಪರಿಪರಿಯ ಶೈತ್ಯೋಪಚಾರವ | ನಿರದೆ ಮಾಡಲ್ಕದಕೆ ಕಾಲಪ್ರಾಪ್ತಿಯಾಗಿರಲು | ಉರುತರದಿ ತಾ ತೊಡೆಗಳಲಿ ಕು | ಳ್ಳಿರಿಸಿಕೊಂಡು ಸುಪಂಚಮಂತ್ರವ | ನಲುಹುತಿರ್ದನು ಶುನಕ ಸುಗತಿಯನ್ನೆ ದುವಂದದಲಿ || ಅರಸ ಕೇಳಾಪಂಚಮಂತ್ರ | ತರದ ತತ್ಪಲದಿಂದಲಾಕ್ಷಣ | ವರಶುನಕ ಚಂದ್ರಾಭಪುರದಲಿ ಮರ್ತಿಮತ್ತಾಗಿ || ಸುರುಚಿರದಿ ತಾ ಯಕ್ಷನಾಗವ || ತರಿಸಿ ಮುನ್ನಿನ ಭವವನೆಲ್ಲವ | ನಿತು ಜೀವಂಧರನೆಡೆಗೆ ಬರುತಿರ್ದನೊಲವಿನಲಿ | ಸುಲಲಿತದಿ ಬಂದಾತನಿದಿರಲಿ | ನಿಲಲು ಜೀವಂಧರನು ಶುನಕಂ | ಗೊಲಿದು ಮತ್ತೆಯು ಪಂಚಮಂತ್ರವನುಸಿರುತಿರೆ ಕಂಡು || ಎಲೆ ಪುರುಷ ನಿನ್ನಿಂದ ದುರ್ಭವ | ವಂದೆನಗೆ ಯಕೃತ್ವವಾಯ್ತಂ || ದಳವಿಯಲಿ ತೆಗೆದಪ್ಪಿ ಹೋಗಿದನಾಕುಮಾರಕನ {! ೬ ೭