ಪುಟ:ಜೀವಂಧರ ಚರಿತೆ.djvu/೧೨೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೦ ಭಾಸ್ಕರನವಿರಚಿತ ೨೦ ಕರಿ ಮಸಗಿ ಗುಣಮಾಲೆಯನು ಕಂ | ಡುರವಣಿಸೆ ದೂರದೊಳು ಜೀವಂ || ಧರ ನಿರೀಕ್ಷಿಸಿ ಹೆಂಗೊಲೆಯ ಕಂಡು ವುದಲ್ಲೆಂದು || ಭರದೊಳಗೆ ಸುಂಡಿಲನು ಸೆಳೆದೊಡ | ವೆರಸಿ ಕುಂಡಲದಿಂ ಕಪೋಲಾಂ | ತರವನಿತೆ ಮದವುಡುಗಿ ತದ್ಧಜ ಮಗುಟ್ಟು ದರಮನೆಗೆ || ೧೯ ಅರಮನೆಗೆ ಗಜ ಮಗು ತನ್ನ ಯ | ಹರಣವನು ರಕ್ಷಿಸಿದ ಜೀವಂ | ಧರನ ಕಂಡಾತನ ಲಸದೂಪಾನುಭಾವನೆಗೆ | ಮರುಳುಗೊಂಡೀಪುರುಷರತ್ನವ | ವರಿಸಬೇಕಿವನಾರೆನುತ ಸು| ಸ್ಥಿರದೊಳೆವೆಯಿಕ್ಕದೆ ನಿರೀಕ್ಷಿಸಿದಳು ಕುಮಾರಕನ || ೨೦ * ಸುರಪನೋ ದಿವಿಜೇಂದ್ರನಿವನಾ | ದರೆ ಶರೀರದಿ ಕಣ್ಣಳಿಲ್ಲಿವ | ನರಸುಧಾಕರನಾದೊಡಿಲ್ಲ ಕಳಂಕವಂಗಜನು | ನಿರುತವಾದರೆ ಹಸ್ತಪದ್ಯ ದೊ | ಕರಳ ಸರಳಿಲ್ಲೀತ ಚೇವಂ || ಧರನೆನುತ ತದ್ವಿರಹದಲಿ ಬಂದಳು ನಿಜಾಲಯಕೆ | - ವರಕುಮಾರಗೆ ಬಳಿಕ ಸುಪ್ರಿಯ | ಕರದಿ ತಚ್ಚಿತ್ರಪ್ರಪಂಚವ | ಬರೆಸಿ ಲೇಖೆಯನರಗಿಳಿಯ ಕಂಧರದೊಳಳವಡಿಸಿ || ಪುರುಷನಪ್ಪಂದದಲಿ ಜೀವಂ | ಧರನ ಕೂಡೆಂದಾಶುಕೇಂದ್ರ | ತರುಣಿಯೊಲವಿಂದಟ್ಟಿ ನೆರೆ ಕಂದಿದಳು ವಿರಹದಲಿ || ೨೨ - ಧರಣಿಪತಿ ಕೇಳಿತ್ತ ದೇವಂ || ಧರಗೆ ಗುಣಮಾಲೆಯ ಕಟಾಕ್ಷದ | ಸರಳು ನಟ್ಟುವು ಕೇಳಲರಿದಾಯಾಲಿಗಳನಲುಗಿ || ತರಹರಿಸಲಳವಡದೆ ಕಾಂತೆಯ | ವರಿಸಬೇಕೆಂದೆನುತ ನಿಜಮಂ | ದಿರಕೆ ಬಂದಾರಾಮದಲಿ ಹೊರ' ದನು ವಿರಹದಲಿ || ೨೩ ೨