ಪುಟ:ಜೀವಂಧರ ಚರಿತೆ.djvu/೧೪೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೩೨ ಭಾಸ್ಕರಕವಿರಚಿತ ಎಂದನೇಕಸ್ತುತಿಸಹಸ್ರಗ | ಳಿಂದಲಾಧನಪಾಲ ನೃಪ ಜೀ | ವಂಧರನ ಕೊಂಡಾಡಿ ಸುತೆಸಹಿತರ್ಧರಾಜ್ಯವನು | ಹಿಂದಿ ಧಾರೆಯನೆರೆದು ಕುಡೆ ಸಂ | ಕ್ರಂದನಿಭನಾಪದ್ಯೆ ಯೊಳು ಸುಖ | ದಿಂದೆ ವಿಭವದೊಳಿರ್ದನಾಚಂದ್ರಾಭಪುರದೊಳಗೆ || - ಇದು ವಿನಮದಮರೇಂದ್ರ ಶ್ರೀಜನ | ಪದಕಮಲಷಟ್ಲ ರಣ ವಾಣೀ | ವದನದರ್ಪಣ ಭೂಸುರೋತ್ತಮ ಬಸವಣಾಂಕಸುತ | ಚದುರ ಭಾಸ್ಕರರಚಿತ ಧರ್ಮ | ಪ್ರದನ ಜೀವಂಧರನ ಚರಿತೆಯೊ | ದುವೆ ಪದ್ಮಾ ಸಂಗವವಸೀವಾಲ ಕೇಳೆಂದ || ಹನ್ನೊಂದನೆಯ ಸಂಧಿ ಮುಗಿದುದು. ೨೬ ೨೮ ಹನ್ನೆರಡನೆಯ ಸಂಧಿ ಸೂಚನೆ|| ಕ್ಷೇಮಲಕ್ಸಿಯ ವರಿಸಿ ದುಷ್ಟ | ಸ್ತೋಮವನು ಬೋಧಿಸುತ ನಡೆದಾ | ಕೈಮಪುರದಲಿ ಕನಕನ ಇಲೆಯನವನಿಪತಿ ಪಡೆದ || ಇಳೆಯ ಪತಿ ಕೇಳಾಕುಮಾರಕ | ತಿಲಕನಾಪಟ್ಟೆ ಯೊಳು ಸೌಖ್ಯದೊ | ಳೊಲವಿನಲಿ ಚಂದ್ರಾಭನಗರಿಯೊಳೊಂದು ವರುಷವನು || ಕಳೆದು ಒಣಕಲ್ಲಿಂದ ನಡೆದ | ಗ್ಗಳದರಣ್ಯದೊಳಾಚರಿಪ ಸ | ಆಲಿತಮಿಥ್ಯಾತಪಸಿಗಳ ಕಂಡವರಿಗಿಂತೆಂದ || ತಂಡುಲವು ದೊರಕದೆ ಜಲಾನಲ | ಭಾಂಡ ದೊರಕಿದೊಡೇನು ಸಫಲವ | ಖಂಡತತ್ವಜ್ಞಾನವಿಲ್ಲದೆ ಬದೆ ದೇಹವನು || ದಂಡಿಸಿದೊಡೇನಹುದು ಮುತ್ತುರಿ | ಗೊಂಡದೊಳಗಿರಲೇಕೆ ಜಡೆಗಳ | ಮಂಡೆಯಲಿ ಧರಿಸಿದೊಡೇನಹುದೆಂದನಾಮುನಿಯ ||