ಪುಟ:ಜೀವಂಧರ ಚರಿತೆ.djvu/೧೪೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಜೀವಂಧರ ಚರಿತೆ ೧೩೩ ಜಲದೊಳಗೆ ಮುಳುಗಿ ಜಟಿಲಗ | ಳೊಳಗೆ ಸಿಕ್ಕಿಹ ಕೆಲವು ಜಂತುಗ | ಇs'ವುವೀಪಂಚಾಗ್ನಿ ಯಿಂದವನಿಯೊಳಗಿಹ ಜೀವ || ಕೆಲವ೦ತವುವೀಹೊದೆದ ಚರ್ಮದ | ಲಲೆವ ಕೆಲವಂಡಜಗಳವಮ್ರ | ತಿಳಿಯೆ ನಿಮ್ಮ ತಪಸ್ಸಿನಿಂದತಿಹಿಂಸೆ ಬಹುದೆಂದ || ಹೃದಯದಮಳಜ್ಯೋತಿಯನು ಬೆಳ | ಗದೆ ನವಾರತಿಯೆತ್ತಲೇನಹು | ದೊದವಿದೊಳಗಣ ಮಲವ ತೊಳೆಯದೆ ದೇಹಕಲ್ಕ ಷವ || ಮುದದಿ ತೊಳೆದೊಡದೇನು ಕರ್ಮವ | ಬಿದಿರಿಸದೆ ಮುಕ್ತಿಯನು ಸಾರುವ | ವಿಧವದೆಂತಂದವನಿಪತಿ ಜರೆದನು ತಪಸ್ವಿಗಳ | ಒಂದಡಿಯನಿಳೆಗೂದಿಹ ಸಿ | ರ್ಬಂಧವೆಕೆಲೆ ಕಾಯಿಕಸುರನು | ತಿಂದು ಜೀವವ ಗಾಸಿಮಾಡುವುದೇಕೆ ಕರ್ಮಗಳ | ದಂದುಗವದೇಕಿವನು'ದು ಸಾ | ನಂದದಲಿ ಸರ್ವಜ್ಞನನು ಭಜಿ | ಸೊಂದು ಮುಕ್ತಿಶ್ರೀಯನೆಂದು ಕುಮಾರ ಬೋಧಿಸಿದ | ೫ ಗರುಡಮತದಿಂದಲ್ಲದಹಿಭಯ | ಕರಗುವುದೆ ಸರ್ವಜ್ಞನಾಮ | ಸ್ಮರಣೆಯಿಂದಲ್ಲದೆ ಭವಾಂಭೋರಾಶಿ ಬತ್ತುವುದೆ || ನೆರೆದು ಹಿಂಸೆಯ ಮಾಟ್ಟಿ ನಿಮ್ಮಾ | ಚರಣೆಯೇಕಿದನು'ದಹಿಂಸಾ | ಪರಮ ಧರ್ಮವೆನಿಪ್ಪ ಶ್ರುತಿವಿಡಿದೆಸಗಿ ನೀವೆಂದ || ಅವ್ಯಯನನಂತಾತ್ಮ ನದ್ವಯ | ದಿವ್ಯತೇಜನಗಮ್ಯತ್ರಿಜಗ | ತೈವ್ಯನಹ ಜಿನಪತಿಯ ಪಡೆದಾಮತದಿ ತಪವೆಸಗಿ || ನವ್ಯಮುಕ್ತಿಶ್ರೀಯ್ಯ ಪಡೆವುದು | ಭವ್ಯವೆನೆಯವರೊಳಗೆ ಕೆಲಬರು | ಭವ್ಯರಾಗೆ ಕುಮಾರ ಹರುಷದಿ ಮತ್ತೆ ಗಮನಿಸಿದ |