ಪುಟ:ಜೀವಂಧರ ಚರಿತೆ.djvu/೧೪೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೩೪ ಭಾಸ್ಕರನವಿರಚಿತ ಮೆಜುವ ದಕ್ಷಿಣದಿಕ್ಕಿನಲಿ ಬಂ | ಧುರದ ವಿಷಯದಿ ವಿಮಳಪುರವರ | ಕರಸು ನರಪತಿಯಾಪುರದಿ ಗುಣಭದ್ರನೆಂದೆಂಬ || ಪರದನಿಹನಾತನ ಕುಮಾರಿತಿ | ವರಸತಿಯ ಮಾಣಿಕ್ಯ ವೆನೆ ವಿ | ಸಂದೊಳೆಸೆದಳು ಮದನಮೋಹನಮೂರ್ತಿಯಂದದಲಿ || ೮ | ಆತನೂಜೆಯನಾಪುರದೊಳೆಸೆ | ವಾತಿಶಯದ ಸರಸ್ರಕೂಟ | ಖ್ಯಾತಜಿನಚೈತ್ಯಾಲಯವದುಂಟಾಕವಾಟಗಳ || ವೀತರಾಗನ ನುತಿಯಿಸಿ [ತೇಶಿಸಿ7 | ದಾತಗೀವೆನೆನುತ್ತ ತನುಜೆಯ | ನೋತು ರಕ್ಸಿ ಸುತಿರ್ದನಾಗುಣಭದ್ರನೊಲವಿನಲಿ || ಅರಸ ಕೇಳ್‌ ಜೀವಂಧರನು ತ | ತುರಕೆ ಬಂದಾಹೋಲ ಜಿನಮುಂ | ದಿರದ ಬಾಗಿಲದೆಂತು ಮುಚ್ಚಿಯ ತೆಜತೆಯಾಸ್ಥಿತಿಯ || ಪುರಜನದಿನ ದಾಕವಾಟವ | ತೆಲತಿಸಿ ದೇವನ ನೋಡಬೇಕೆಂ | ದರುಹಗಭಿಮುಖವಾಗಿ ಸಂಸ್ತುತಿಸಿದನು ಜಿನಪತಿಯ | ೧೦ ಜಯಜಯ ಮಹಾಮಹಿಮ ನಿರುಪಮ | ಜಯಜಯ ಜಯಾನಂದ ಶುಭಕರ | ಜಯಜಯ ಜಗನ್ನಾಥ ಜನನವಿದೂರ ವಿಜ್ಞಾನ | ಜಯಜಯ ತ್ರಿದಶೇಂದ್ರವಂದಿತ | ಜಯತು ಶಾಶ್ವತ ಜಯ ಜಗತ್ಪತಿ | ಜಯಜಯೆಂದು ಕುಮಾರ ಸಂಸ್ತುತಿಸಿದನು ಜಿನಪತಿಯ | M - ಅಕ್ಷಯ ವಿಶಾಲಾಕ್ಷ ಸುಲಲಿತ | ವಕ್ಷ ಮೋಕ್ಷಾಧ್ಯಕ್ಷ ತ್ರಿಭುವನ | ದಕ್ಷ ನುತಜನಪಕ್ಷ ಸಂಪೂಜಿತಸಹಸ್ರಾ || ಅಕ್ಷರ ನಿರಾಪೇಕ್ಷ್ಯ ಮನ್ಮಥ | ಶಿಕ್ಷ ಕಾಲಕ್ಷ್ಮಯ ಮಹಾತ್ಮ ಸು | ದಕ್ಷ ಯಕ್ಷಾಧೀಶಸನ್ನು ತ ಕರುಣಿಸೆನಗೆಂದ | ೧೨