ಪುಟ:ಜೀವಂಧರ ಚರಿತೆ.djvu/೧೪೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

M ಭಾಸ್ಕರಕವಿರಚಿತ ೧೮ - ೧ ಭಾಸುರಾತ್ಯಕ ನೀನೆ ರಾಗ ದ್ವೇಷರಹಿತನು ನೀನೆ ಮಾಯಾ | ಪಾಶಮೋಚನ ನೀನೆ ಸಕಲಜಗದ್ದು ರುವು ನೀನೆ || ದೋಷರಹಿತನು ನೀನೆ ಕರುಣಾ | ವಾಸ ನೀನೆ ಮಹೇಶ ನೀನೆ ಸು | ರೇಶನುತ ನೀನೆಂದು ಸಂಸ್ತುತಿಸಿದನು ಚೆನಪತಿಯ | ಪರಮಮುಕ್ತಿಯ ಗೃಹದ ಬಾಗಿಲ | ತೆರೆಸುವಾತಗಿದೇನು ಘನವೆಂ | ದುಹುವಂತಾವಮಯದ ಕವಾಟ ತೆತಿದಿರಲು || ಪುರಒನವು ಬೆಂಗಾಗಿ ಶಾಂತೀ | ಶ್ವರನನರ್ಚಿಸುತಿರಲು ಜೀವಂ | ಧರನೆಡೆಗೆ ಗುಣಭದ್ರ ಹರುಷದಿ ಬಂದು ತಾ ನುಡಿದ || ನೀ ಮಹಾತ್ಯ ಕನದಿನೀಸು | ತಾಮನುತಜಿನಪತಿಯ ವಾಸದ | ಹೇಮಮಯದೀಕದವ ತೆಗೆಸಿದೆಯಾಗಿ ನನ್ನ ಸುತೆ || ಕ್ಷೇಮಲಕ್ಷ್ಮಿಯ ಕುಡುವೆನಾಕೆಯ | ಕಾಮಿಸುವುದೆನೆ ಮದುವೆಯಾಗಿ ಸ | ನಾಮಜೀವಕನಾಸತಿಯ ಕೂಡಿರ್ದನೊಲವಿನಲಿ || ಜನಸ ಕೇಳಾವಿಮಳಪುರದೊಳ | ಗನವರತಮಾಕ್ಷಮಲಕ್ಷ್ಮಿಯ | ಜನಪ ವರಿಸುತ ಕೆಲವು ದಿನವಲ್ಲಿ ರ್ದು ನೃಪ ತೆರಳಿ | ವನಕೆ ಬರುತಿರೆ ಹೊಲನ ಹರಗುತ | ಕನಲಿ ಸಂಸಾರಕ್ಕೆ ಬಳಲುವ | ವಿನುತಶೂದ್ರನ ಕಂಡು ಕೃಪೆಯಿಂದರಸನಿಂತೆಂದ || * ಕಿಡುವ ಸಂಸಾರಕ್ಕೆ ನೀನಿಂ | ತೊಡಲ ಕಟ್ಟಅದೇಕೆ ದೇಹದೊ | ಆಡಿದ ದೋಷಗಳೆಂಟ ಹಿಂಗಿಸುವಷ್ಟಗುಣಗಳನು || ಹಿಡಿದು ಜೆನಪನ ಭಜಿಸು ಮುಕ್ತಿಯ | ಪಡೆಯೆನಲು ತನಗದ ಭೇದವ | ಪೊಡವಿಪತಿ ತಿಳುಹೆನಲು ಶೂದ್ರಂಗರಸನಿಂತೆಂದ || ೨೦ ೨೧ ೨5