ಪುಟ:ಜೀವಂಧರ ಚರಿತೆ.djvu/೧೫೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೪ ಭಾಸ್ಕರಕಏರಚಿತ ಲಲನೆಯನು ಮಾವನ ಸಮೀಪದಿ | ನಿಲಿಸಿ ಸಖರೊಡನಾಕುಮಾರನು | ಹಲವು ಪಯಣದಿ ದಂಡಕಾಟವಿಗೈದಿ ಕಂಗಳಲಿ || ಜಲ ಹರಿಯೆ ಕರಿಗಂದಿ ರ್ತದಲಿ || ಬಲಿ ತನ್ನ ಯ ಬರವ ಹಾರುತ | ಅಳವಟದ ತಜ್ಜನನಿಯನು ಕಂಡರಸ ಹೊರಟಿದನು || ೧೮ ಹಸಿದ ಹಸುವೆಳವಲ್ಲ ಕವಿ ನವ | ರಸವನಂಬುಜ ರವಿಯನುತ್ಪಲ | ಸಸಿಯ ವಿಪ್ರ ನಿಯಂತ್ರಣವ ನಿರ್ಧನಿಕನರ್ಥವನು || ಅಸತಿ ರಜನಿಯ ಮುನಿಸ ಮುಕ್ತಿಯ | ನೊಸೆದು ಪಡೆ ವಂದದಲಿ ಘನಸಂ | ತಸದಿ ಜೀವಂಧರನ ಕಂಡಪ್ಪಿದಳು ಹರಿಣಾಕ್ಷಿ | ೧೯ ಧರಣಿಪಾಲಲಲಾಮ ಸತ್ಯಂ | ಧರನ ಬಸಿಯಲಿ ಬಂದು ನೀನೀ || ಪರಿಯಲಿಸ್ಸರೆ ಕಂದರೊಂದಾಸುತನ ಹಣೆ ಹಣೆಯ | ಹೊ°ಸಿಕೊಂಡತಿ ಮುಗೆ ತನ್ನಯ | ತೆಲನನಕಸಲು ಸುತನ ವೃತ್ತಾಂ|| ತರವನೆಲ್ಲವ ಕೇಳಿ ಬೆಬ್ಬಳಿದಲಿದಳು ರಮಣಿ || ೨೦ ಸರಸಿಜಾನನೆಯಿಂತು ಮಲುಗು | ತಿರಲು ಜೀವಂಧರನು ನಾನಾ | ಪರಿಯ ನಯದಿಂ ತಿಳುಹಿ ಜನನಿಯ ಶೋಕವನು ಬಿಡಿಸಿ | ದುರುಳ ಕಾಷ್ಠಾಂಗಾರಕನ ಸಂ | ಹರಿಸಿ ಕೊಳ ಬೇಕೆಂದು ರಾಜ್ಯವ | ಭರದೊಳೆನೆ ಸುಕುಮಾರಗಿಂತೆಂದಳು ಸರೋಜಾಕ್ಷಿ || ೨೨. ಎಲೆ ಮಗನೆ ತನ್ನ ಳವನ'ದರಿ | ಗಳನು ಜಯಿಸಲು ಬೇಕು ನೀ ದು | ರ್ಬಲದಿ ನಡೆವುದನೀತಿಯೆನೆ ಕೋಪಾಗಿ ಪಲ್ಲವಿಸೆ || ಮುಳಿದು ಕಾಷ್ಠಾಂಗಾರಕನ ಕೊಂ || ದಿಳೆಯ ಕೊಂಬುದಿದೇನರಿದು ಎಂ | ದಲಘುಭುಜಬಲ ನುಡಿಯೆ ಮಗುವಿಂತೆಂದಳಾರವಣಿ || ೨೨ ೨೦