ಪುಟ:ಜೀವಂಧರ ಚರಿತೆ.djvu/೧೫೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಜೀವಂಧರ ಚರಿತ ೧೪೯ ೬ ಭೂರಮಣನಾನಗರದೊಳಗೆ ಎ | ಹಾರಿಸುತ್ತಿರಲಲ್ಲಿ ವೈಶ್ಯಾ | ಧಾರ ಸಾಗರದನಾತ್ಮಜೆ ವಿಮಲೆಯೆಂಬುವಳು | ಮಾರನಿಷ್ಠಾದೇವಿಯಂದದಿ || ಚಾರುಹರ್ಮ್ಯಾಗ್ರದಲಿ ಕುಚ ಮುಡಿ | ಹಾರವಲುಗಲು ಸೆಂಡನಾಡುತ್ತಿರ್ದಳಿಯಲಿ || - ಕುರುಳು ಭಾಳದೊಳಾಡೆ ಕರ್ಣಾ | ಭರಣ ಕದಪಿನೊಳಾಡೆ ಕಬರೀ | ಭರವು ಬೆನ್ನೊಳಗಾಡೆ ಹಾರ ಕುಚಾಗ್ರದೊಳಗಾಡೆ || ಗುರುಜಘನವಲು - ಡೆ ಸೆಳೆನಡು | ಭರದಿ ಬಳುಕಲು ಸಂಡನಾಡು | ತಿರೆ ಕರಗಳಿಂ ಸೆಂಡುರುಳಿ ಬಿರ್ದುದು ಧರಿತ್ರಿಯಲಿ || ಧರೆಯೊಳುರುಳಿದ ಸೆಂಡ ಜೀವಂ | ಧರನು ಕಂಡೆಲ್ಲಿಯದಿದೆಂದಂ | ಬರವನೀಕ್ಷಿಸಲಾಕುಮಾರಿಯ ದೃಷ್ಟಿ ತದ್ಧ || ಎರಡುವೊಂದಾಗಿ ಸತಿ ಭೂ | ವರನ ರೂಪಿಗೆ ಮರುಳುಗೊಂಡಾ | ವಿರಹದಲಿ ಮೈಮರೆದಳನುಪಮಚಿತ್ರದಂದದಲಿ || - ಇಂದುಮುಖಿಯಾವಿರಹದಲಿ ಕರಿ | ಗಂದಿರಲು ವಿರಹವನು ಸಿತಗರ | ವಿಂದನೇತ್ರೆಯರಲಹೆ ಗಂಧೋತ್ಸಟನ ಕರೆದೆಂದ || ನಂದನೆಯ ಜೀವಂಧರಗೆ ಸಾ | ನಂದದಿಂದಾನೀವೆನೆನೆ ಲೇ | ಸೆಂದು ಮದುವೆಯ ಮಾಡಿದನು ಸುತಗಧಿಕವಿಭವದಲಿ || ವಿಮಳಮತಿ ಜೀವಂಧರನು ನವ | ವಿಮಲೆಯನು ವೈವಾಹವಾಗಿಯೆ | ಸಮುದಿತಾನಂದದಲಿ ತದ್ದುಣಮಾಲೆ ಮುಂತಾದ | ರಮಣಿಯರ ರಮಿಸುತ್ತ ಜನನಿಯ | ಮಮತೆಯನು ನೆನೆಯುತ್ತ ರಾಜ್ಯಾ | ಗಮನವನು ಚಿಂತಿಸಿ ಪುರಾಂತದೊಳಿರ್ದನೊಲವಿನಲಿ | ಇ ೮