ಪುಟ:ಜೀವಂಧರ ಚರಿತೆ.djvu/೧೬೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೫೪ ಭಾಸ್ಕರಕವಿರಚಿತ ತನುವಿನಲಿ ರೋಮಾಂಚವತಿ ಕಂ | ಪನವು ನೇತ್ರದೊಳಶ್ರು ಕೆಂಪಾ | ನನದಿ ಸಂಸ್ಥಿತ ಸೊಂಪು ಕದಪಿನೊಳುದ್ಧ ಫರ್ಮಾಂಬು | ಮನದೋಳಂಗಜತಾಪವನ್ನೋ || ಹನವು ಬಗೆಯೊಳು ಲಜ್ಜೆ ಭಯ ಸಂ || ಜನಿಸೆ ಸುರಮಂಜರಿ ನಿರೀಕ್ಷಿಸಿದಳು ಕುಮಾರಕನ | ೩0 | ಸುದತಿ ಬಲಿಕಾವೃದ್ಧನನು ಕಾ | ಣದೆ ಮಹಚ್ಚ ರಿವಡಲು ಸಂಕೇ | ತದಲಿ ಜೀವಂಧರನು ಮುನ್ನಣಕಿಸಿದ ಮಿತ್ರಂಗೆ || ವಿಧುವದನೆ ತನಗೊಲಿದು ಬಂದಾ | ವಿಧವ ತೋರಲು ನಾಚಿ ಸುವದು | ಮದನನಿಭ ನಿನಗೆಂದು ಸಖ ಹೊಗಳಿದನು ಜೀವಕನ | ೩೧ ಇತ್ತ ಸುರಮಂಜರಿಯ ಪಿತನಾ | ವಾರ್ತೆಯGದಿಬ್ಬರನ್ನು ಕರೆತಂ | ದುತ್ತರೋತ್ತರವಾಯ್ತು ಸತಿಗೆಂದತಿವಿಳಾಸದಲಿ || ಪ್ರಿಯನು ಜೀವಂಧರಗೆ ಸುಮು | ಹೂರ್ತದಿಂದಲಿ ಧಾರೆಯೆರೆಯೆ ಪ | ವಿತ್ರ ಸುರಮಂಜರಿಯ ರಮಿಸುತ್ತಿರ್ದನೊಲವಿನಲಿ || ೩೨ ಇದು ವಿನಮದಮರೇಂದ್ರ ಶ್ರೀಜಿನ | ಪದಕಮಲಷಟ್ಟ ರಣ ವಾಣೀ || ವದನದರ್ಪಣ ಭೂಸುರೋತ್ತಮ ಬಸವಣಾಂಕಸುತ | ಚದುರ ಭಾಸ್ಕರರಚಿತ ಧರ್ಮ | ಪ್ರದನ ಜೀವಂಧರನ ಚರಿತೆಯೊ | ಆದುವೆ ಸುರಮಂಜರಿಯ ಪರಿಣತೆಯೀಪ್ರಬಂಧದಲಿ || ಹದಿನಾಲ್ಕನೆಯ ಸಂಧಿ ಮುಗಿಯಿತು.