ಜೀವಂಭರ ಚರಿತ ೧೫೫ ಹದಿನೈದನೆಯ ಸಂಧಿ ೧ ಸೂಚನೆ|| ಭರದಿ ಚಾಪದೊಳತುಳಯಂತ್ರವ | ಮುಂದು ಲಕ್ಷ್ಮಿ ಯ ಪಡೆದು ಜೀವಂ | ಧರನು ಕಾಷ್ಠಾಂಗಾರಕನ ಕೊಂದಿಳೆಯ ಪಾಲಿಸಿದ | ಭೂರಮಣ ಕೇಳಿ ಕಾಷ್ಠಾಂ | ಗಾರ ತನ್ನನು ಕಂಡರಖಿಳ | ಕ್ಷಾರಮಣರತಿಗರ್ವದಲಿ ಗೋವಿಂದರಾಜನನ | ಬಾರನಾತನ ಕರೆಯಬೇಕೆಂ | ದಾರುಬಟಿಯಲಿ ಮಂತ್ರಿಗಳನವಿ | ಚಾರನಟ್ಟಲು ಹೊಕ್ಕ ರವರು ವಿದೇಹಪಟ್ಟಣವ || ಬಂದು ಮಂತ್ರಿಗಳನುನಯದಿ ಗೋ || ವಿಂದರಾಜನ ಕರೆಯಲಿಕೆ ಬಹ | ನೆಂದವರ ಮುಂದಟ್ಟಿ ಕಾಷ್ಠಾಂಗಾರಕನನಲ್ಲಿ || ಕೊಂದಿಳೆಯ ಪಟ್ಟವನು ಜೀವಕ | ಗೊಂದಿಸಿಯೆ ಮತ್ತು ತೆಯನಿತ್ಸೆ | ನೆಂದು ವಿಜಯಾವತಿಸಹಿತ ನಿಶ್ಚಸಿದನು ಭೂಪ || ಬಳಿಕ ಗೋವಿಂದಾವನೀಶ್ವರ | ಹಲವು ಪಯಣದೊಳನುಜೆಸಹಿತಾ | ಹೋಟಲಿಗೈತರಲೆದ್ದು ಕಾಷ್ಠಾಂಗಾರ ತಕ್ರೈಸಿ || ಒಲಿದು ಮನ್ನಿಸಿ ಕಳುಹೆ ಮಾವನ | ಬಟಿಗೆ ಜೀವಂಧರನು ಬಂದಡಿ | ಗಳಿಗೆ ನಮಿಸಲು ನಲಿದು ಬಿಗಿಯಪ್ಪಿದನು ತವಕದಲಿ | - ಅಳಿಯನಳವಾಕಾರಕಾನೃಪ | ನೊಲಿದು ಮತ್ತುತೆ ಲಕ್ಷ್ಮಿಯನು ಕೋ | ಮಲಗೆ ಕೊಡುವೆನು ವಿಗಡಯಂತ್ರವ ಜಯಿಸಲಿವನುಟಿಯೆ || ಗೆಲುವರಿಲ್ಲ ಸೊಯಂಬರಕೆ ನೃಪ || ಕುಲವ ನೆರಹಿ ಕುಮಾರನಂತವೆ || ತಿಳುಹಬೇಕೆಂದಿಂತು ನಿಶ್ಚಯಿಸಿದನು ಗೋವಿಂದ ||
ಪುಟ:ಜೀವಂಧರ ಚರಿತೆ.djvu/೧೬೩
ಗೋಚರ