ಪುಟ:ಜೀವಂಧರ ಚರಿತೆ.djvu/೧೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಜೀವಂಧರ ಚರಿತ ೩ ೪೦ ದೇವದೇವ ಸುರೇಂದ್ರನುತ ಭ | ವ್ಯಾವಲೋಕನ ವಿಮಳಮುಕ್ತಿ | ಶ್ರೀವರ ಜಗನ್ನಾಥ ಜನನವಿದೂರ ಸಾಕಾರ | ಪಾವನ ಪರಂಜ್ಯೋತಿ ಶಾಶ್ವತ | ಜೀವರೂಪ ಕೃಪಾಂಬುನಿಧಿ ರಾ || ಜೀವಲೋಚನ ಸದ್ದು ಣಾತ್ಯ ಕ ಕರುಣಿಸೆನಗೆಂದ || - ನಿರುಪಮ ನಿರಾಪೇಕ್ಷ ನಿರ್ಭಯ | ನಿರತಿಶಯ ನಿರ್ಮಾಯ ನಿಸ್ಪೃಹ | ನಿರಜ ನಿರಹಂಕಾರ ನಿರ್ಮಲ ನಿತ್ಯ ಸಿರ್ಲೇಪ || ನಿರತ ನಿತ್ಯಾನಂದ ನಿರ್ಮದ | ನಿರಥ ನಿಷ್ಕಳ ನಿರ್ಮಲಾತ್ಮಕ | ನಿರಜ ನಿಜ ನಿವಾ ಮ ನಿಶಲ ಕರುಣಿಸೆನಗೆಂದ || ಸರ್ವಗತ ಸರ್ವಜ್ಞ ಸದಮಲ | ಸರ್ವಮಯ ಸರ್ವಾಮರಾರ್ಚಿತ | ಸರ್ವಲೋಕೇಶ್ವರ ಸಮಾಹಿತಸರ್ವಗುಣನಿಲಯ || ಸರ್ವಭೂತಾತ್ಯಕ ಭವಾಂತಕ | ಸರ್ವಸಂಗವಿಮುಕ್ತ ಸನ್ನುತ | ಸರ್ವದುರಿತವಿದೂರ ಸನ್ನತಿ ಕರುಣಿಸೆನಗೆಂದ || ವಿಶ್ವಮಯ ವಿಶ್ವೇಶ ವಿಶ್ವಗ | ವಿಶ್ವತೋಮುಖ ವಿಶ್ವ ಪೂಜಿತ | ವಿಶ್ವ ಲೋಚನ ವಿಶ್ವಪೂರಿತ ವಿಶ್ವ ದಾತಾರ || ವಿಶ್ವರೂಷ ಮಹೀಶ್ವರೇಶ್ವರ | ವಿಶ್ವಗತ ವಿಶ್ವಾತ್ಮ ವಿಶ್ರತ | ವಿಶ್ವಮೂರ್ತಿ ವಿಶುದ್ಧ ಸನ್ನತಿ ಕರುಣಿಸೆನಗೆಂದ || - ಶ್ರೀಮದಸವರ್ಗಾ೦ಗನಾಸು | ಪ್ರೇಮ ನಿರ್ಜಿತಕಾಮ ಸುಗುಣಾ | ರಾವ ಧರ್ಮೋದ್ದಾಮ ನುತಸುತ್ತಾಮ ನಿಸ್ಸಿಮ | ಸೋಮರವಿಶತಕೋಟಿತೇಜಸ | ನಾಮ ವಿಮಲಗಣಾಭಿರಾಮ ಮ | ಹಾಮಹಿಮ ಭವಭೀಮ ಶಂಕರ ಕರುಣಿಸೆನಗೆಂದ || ೪೧ ೪೨. ೪೩