ಪುಟ:ಜೀವಂಧರ ಚರಿತೆ.djvu/೧೭೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

MLX ಭಾಸ್ಕರಕವಿರಚಿತ ಇದು ವಿನಮದಮರೇಂದ್ರ ಶ್ರೀಜಿನ | ಪದಕಮಲಷಟ್ಟ ರಣ ವಾಣೀ | ವದನದರ್ಪಣ ಭೂಸುರೋತ್ತಮ ಬಸವಣಾಂಕಸುತ || ಚದುರ ಭಾಸ್ಕರರಚಿತ ಧರ್ಮ | ಪ್ರದನ ಜೀವಂಧರನ ಚರಿತೆಯೊ | ಇದುವೆ ಪಟ್ರೋತ್ಸಾಹವರ್ಣನೆಯರಸ ಕೇಳೆಂದ | ಹದಿನೈದನೆಯ ಸಂಧಿ ಮುಗಿದುದು. ೫೫. ೫೫ ಹದಿನೇಳನೆಯ ಸಂಧಿ. ಸೂಚನೆ | ಲಲನೆಯರು ಸಹಿತಾನೃಪಾಲಕ | ತಿಲಕ ಬನದೊಳಗೆರಡು ಮಾಸವ | ಕಳೆದು ಮುಗು ತಂದು ಹೊಕ್ಕನು ರಾಜಮಂದಿರವ || ಧರಣಿಪಾಲಕ ಕೇಳು ಜೀವಂ || ಧರನು ಲಕ್ಷಿಣಿ ಪದ್ದೆ ಸುರಮಂ | ಜರಿ ವಿಮಲೆ ಗುಣಮಾಲೆ ವಿದ್ಯಾಧರಿ ಕನಕಮಾಲೆ || ಸುರುಚಿರ ಶ್ರೀನಿಸುವಷ್ಟಮ | ತರುಣಿಯರೊಳೊಬ್ಬೊಬ್ಬ ಸುಕುಮಾ | ರರನು ಪಡೆದಾನಂದಲಿಲೆಯೊಳಿರ್ದನನವರತ || ಒಂದು ದಿನ ವನಪಾಲಕನು ಜೀ | ವಂಧರನ ಸಮ್ಮುಖಕೆ ಬಂದೋಲ | ವಿಂದಪೂರ್ವಫಲಾದಿಗಳ ಕಾಣಿಕೆಯನಿಗಿ || ನಂದನವ ವರ್ಣಿಸಲಶಕ್ಯ ಮ | ಹೇಂದ್ರಗೆನಲೆನ್ನಳವೆ ದೇವರು | ಬಂದು ನೀವ್ ಚಿತ್ತೈಸಬೇಕೆಂದೆನುತ ಕೈಮಗಿದ || - ವಾರಿಸಿಧಿ ಪೂರ್ಣೇಂದುವನು ನೆರೆ | ಹಾರುವಂದದಿ ನಿಮ್ಮ ಬರವನು | ಚಾರುವಂದನ ಬಯಸುತಿದೆ ಸುಕುಮಾರಕರು ಸಹಿತ || ನಾರಿಯರು ಸಹಿತೊಂದುಮಾಸ ವಿ | ಹಾರಿಸುವದೆನೆ ಬಹೆನೆನುತ ಮಹಿ | ಭಾರಮಣನಾಹದನ ಸಾಲಿಸಿದನು ಪುರಾಂತದಲಿ ||