ಪುಟ:ಜೀವಂಧರ ಚರಿತೆ.djvu/೧೭೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೦, Mಛ ಭಾಸ್ಕರಕವಿರಚಿತ ತಳಿರಿನಗ್ನಿ ಯನಳಿಗಳಿದ್ದಿಲ | ನಳವಡಿಸಿ ಮಂದಾನಿಲನ ತಿದಿ | ಗೊಳಿಸಿ ಶುಕ ನೆರವಾಗೆ ಮಧುಕಮ್ಮ ಅನು ವನವೆಂಬ || ಕುಲುಮೆಯಿಂದರಲಸಗಳ ಮಾ | ಡಲು ಸಿಡಿದ ಕಿಡಿಯೆನೆ ಸರಾಗೋ | ದೃಳಿತಶೋಕೆಯ ತರುವ ನೃಪ ನೋಡೆಂದು ತೋರಿಸಿದ || ೯ * ವನಸತಿಯ ಸೆಳ್ಳುಗುರೋ ವಿರಹಿಯ | ಮನವ ಕೊನೆಯಲು ಚಿತ್ತಭವನಾ | ಇನುಪಮಿತ ಕರಗಸವೊ ಮಧುಪಾನವನಳಿವಾತ || ಅನುಭವಿಪ ದೋಣಿಗಳೂ ಹರರಿಪು | ವೆನುತ ಹೋಗಿಕ್ಕಿದ ವಸಂತಕ | ನೆನಲು ರಂಜಿಸ ಕೇತಕಿಯನವನೀಶ ನೋಡೆಂದ || ೧೦. ಧಾರಿಣಿಗೆ ಹೊರೆಯಾಗದಿರಲು | ನಾರನುಟ್ಟು, ವನಾಂಬುವೀಂಟಿಯೆ | ಮಾರುತಾರ್ಕಪ್ರಭೆಗಳುಕದೇಕಾಂತದಲಿ ವನವ || ಸಾರಿ ತಸವಾಚರಿಸೆವೆನುತವೆ | ಚಾರು ಕಂಗಳ ಮುಚ್ಚಿ ಮೆರೆದಿವೆ | ನಾರಿಕೇಳಗಳರಸ ನೋಡಿವು ತಪಸಿಯಂದದಲಿ || ೧೧ ಮಲಿನ ಪುಷ್ಪಲತಾಂಗನೆಗೆ ನೀ | ನೆಳಸುತಿಹ ಮಾತಂಗಜಾತಿಗೆ | ಳೊಳಗೆ ದಾನವ ಕೊಂಬೆ ಮೇಲಾಡಿಗ ಮಧುಪಾನಿ | ಚಲಹೃದಯ ನೀನೆನ್ನ ಮುಟ್ಟದೆ | ತೊಲಗೆನುತೆ ಕೈಸನ್ನೆ ಗೆಯ್ಯಂ | ತಲುಗುವೆಲೆಗಳೊಳೆಸೆವ ಸಂಪಗೆಯರಸ ನೋಡೆಂದ || ೧೨ ವಿರಹಿಯೆಂಬ ಮದೇಭವನು ಕಾ | ತರಿಸಿ ಮನ್ಮಥನೆಂಬ ಕೇಸರಿ | ಶಿರವ ಮೆಟ್ಟಿ ಮಹೋಗ್ರದಿಂ ಸೀಟಿಲು ನಖಾಗ್ರದಲಿ || ಸುರಿವ ರುಧಿರದ ಧಾರೆಯೆಂದೆನ | ಲರುಣತೆಯನೊಂದಿಹ ಪಲಾಶದ | ಮರನ ನೀ ನೋಡೆಂದು ಭೂಮಿಪತಿಗೆ ತೋpಸಿದ || ೧೩