ಪುಟ:ಜೀವಂಧರ ಚರಿತೆ.djvu/೧೭೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಜೀವಂಧರ ಚರಿತೆ MS ೧೫ ವದನವಾರಿಜಪರಿಮಳವ ಸೀ | ರ್ಪಧರಬಿಂಬಾಮೃತವ ಸವಿದತಿ | ಮೃದುವಪರ್ಲತೆಗಳಲಿ ಗಾಢಾಲಿಂಗನಂಗೈದು || ಮುದದಿ ಕೇಶಾಳಿಗಳ ಬರಸೆಳೆ | ದೊದವಿ ಕಟಿಪುಳಿನಸ್ಥಳೋದಕ | ಮದನರಸಮೆನೆ ನೆರೆದ ಮಂದಾನಿಲ ವನಾಂಗನೆಯ || ೧೪ ಗಿಳಿಗಳೊಪ್ಪದಿ ಪಾಡಿ ಸಲಮ | ದ್ದಳೆಯ ಬೆಡಗಿಂದನಿಲ ಲತೆಗಳ | ನಲೆದು ಬಾಚಿಸಿ ತಾಳರವ ಕೋಗಿಲೆಯೊಳೊಂದಿರಲು || ಅಳಿಬಳಗ ಕಹಳೆಗಳ ಪೂರಿಸೆ | ಲಲಿತವಿಭ್ರಮಗತಿಗಳಲಿ ವನ | ಲಲನೆ ನೃತ್ಯವನಾಡುವಳು ಭೂಪಾಲ ಕೇಳೆಂದ || ಆಲಲಿತನಂದನವನವನೀ | ಪಾಲಕಗೆ ವನಪಾಲ ತಾನತಿ | ಲೀಲೆಯಲಿ ತೋರಿಸಲವಂಭಿಮತವನೊಲಿದಿತ್ತು | ಬಾಲೆಯರಿಗಾರಾಮದೊಳಗೆ ವಿ | ಶಾಲವನಮಂಟಪವನೆಡೆಗೆಡೆ | ಗೋಳಿಯಲಿ ಮಾಡಿಸಿದನಾಭೂಪಾಲ ಕೇಳೆಂದ || ೧೬ ಕೃತಕಶೈಲದ ಮಂಟಪದೊಳಾ | ಕ್ಷಿತಿಪನಷ್ಟಮಕಾಂತೆಯರು ಸಹಿ || ತತಿವಿಳಾಸದೊಳಿರಲು ನವದ್ರಷ್ಟಾಪಚಯಕೊಸದು || ಸತಿಯರಾವನದೊಳಗೆ ನಯನ | ದ್ಯುತಿ ದಿಶಾವಳಿ ಮುಸುಕೆ ಕುಸುಮ | ಪ್ರತತಿಗಳ ನೆರೆ ತಿರುಹುತಿರ್ದರು ಬಹಳ ಹರುಷದಲಿ || ಕಚವಲುಗೆ ನಡು ಬಳುಕೆ ಸೋರ್ಮುಡಿ || ವಿಚಲಿಸಲು ದೃಗ್ವದನದಂತ | ಪ್ರಚಯಕಕ್ಷಕಪೋಲಕರ್ಣಾಭರಣ ತಳತಳಿಸೆ | ಕುಚ ಕುಣಿಯೆ ತನು ಬೆಮರೆ ನವಮಣಿ | ಖಚಿತಕಂಕಣ ಝಣಝಣೆನೆ ಶುಕ | ವಚನೆಯರು ಪೂಗೊಯ್ದ ರಾಬನದೊಳಗೆ ಲೀಲೆಯಲಿ || ೧೮ ೧೭