ಪುಟ:ಜೀವಂಧರ ಚರಿತೆ.djvu/೧೮೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೭೪ ಭಾಸ್ಕರಕವಿರಚಿತ ಅಳಕವಳಿ ಕುಚ ಚಕ್ರವಾನನ | ಜಲಜ ಲಾವಣ್ಯಾಂಬು ನಿರ್ಮಲ | ಜಲ ನಿತಂಬವೆ ಪುತಿನ ಗಮನ ಮರಾಳ ವಚನ ಶುಕ || ಲಲಿತಲೋಚನ ಕುಮುದ ನಾಭಿಯ | ಸುಗಳಾಗಲು ಸರಸಿ ಸರಗಳೊ | ಜೊಲಿದು ನರ್ತಿಸ ತೆಹದಿ ಕೊಳನೊಳಗೆಸೆದರಬಲೆಯರು | ೩೯ ಕರದ ತೆಪ್ಪದೊಳೊಸೆದು ಸುರಮಂ | ಜರಿಯನೀಸುತ ಜಾದಂತವ | ನಿರದೆ ಲಕ್ಷ್ಮಿಯ ಪಡೆದು ಸದ್ದಿ ಯನಪ್ಪಿ ವಿಮಲೆಯೊಳು || ಬೆರಸಿ ನೀರೊಳು ಮುಗಿ ವಿದ್ಯಾ | ಧರಿಯ ಚುಂಬಿಸಿ ಕನಕಮಾಲೆಯ | ನರಸನೊದೆದತಿಚಾತುರದಿ ನೀರಾಟವಂಡಿಸಿದ | ೪೦ ತಿಳಿಯುದಕವೆಂದಂಗಕಾಂತಿಯ | ತುಳುಕುವರು ಕಣು ಹೊಳೆಯೆ ಮೀನಂ || ದಳುಕುತಳಿಕುಳವೆಂದು ಹೇಳುತಿನೂಕುವರು ಕುಂತಳವ | ತಳಿರೆನು,ಡಿವಿಡಿವ ವದನವ | ಜಲಜವೆಂದಾವನವ ಸೋಕುತ | ನಲಿದು ಮುಗ್ಗೆಯರಾಡಿದರು ಜಲಕೇಳಿಯೊಲವಿನಲಿ | ೪೧ - ಅರಸ ಕೇಳ್ಳೆ ಬಟಕ ಜೀವಂ | ಧರನು ನಾನಾಪರಿಮಳೋದಕ | ಭರಿತ ಖೇಡಾಕುಳಿಗೆ ಬಂದಬಲೆಯರಿಗೊಲವಿನಲಿ || ಮೆರೆವ ವಣಿಮಯಯಂತ್ರಗಳ ಕೊ | ಟೈರಸಿಯರು ಸಹಿತೋಕುಳಿಯ ವಿ | ಸರದೊಳಾಡಿದನರಸನಭಿನವಕಾಮನಂದದಲಿ || ಲಾಲಿತದಿ ರತಿ ಮದನಗೊಲಿದು ವಿ | ಶಾಲತರ ಮಲ್ಲಿಗೆಯ ಹೂವಿನ ! ಮಾಲೆಯಿಕ್ಕಿದಳೆನಲು ಯಂತ್ರದಿ ಗಂಧವನು ಮೊಗೆದು || ಲೋಲಕಕ್ಷ ಕಟಾಕ್ಷರುಚಿಗಳು | ಸಾಲಿಡಲು ನೆಗೆದಬ್ಬರಿಸಿ ಗುಣ | ಮಾಲೆ ಜೀವಂಧರನ ಮೇಲೊಂದಿದಳು ತವಕದಲಿ || ೪೨ ೪೩