ಪುಟ:ಜೀವಂಧರ ಚರಿತೆ.djvu/೧೯೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಜೀವಂಧರ ಚರಿತ ೧೮೬ ಸ್ಮರನೃಪನ ವಿಜಯಾಂಕಮಾಲಾ | (ುರಿತಕೇತನವೆನೆ ಭುಜಂಗರು | ನೆರೆದು ತಾಟೆತಕನಕಘಂಟಾರಾವ ಶುಕಪಿಕದ || ವಿರಹಿಗಳ ಮದನಾಗಮವನು | ಚರಿಸುವಬಲಾನೀಕದಿಂದತಿ | ಮೆರೆವ ವೇಶ್ಯಾವಾಟವನು ಹೊಕ್ಕನು ಮಹೀಪಾಲ || ೨೯ ನೋಟ ವಶ್ಯ ಸುಜಾಣೆ ಮೋಹನ | ಕೂಟ ವಶ್ಯ ಸ್ತ್ರೀಯಸುರತೋ | ಜ್ಞಾಟವಾಕರವೇಗಸ್ತಂಭನ ನವರಸೋದ್ಭವನ || ತೋಟಿಯಾಕರ್ಷಣ ವಿಯೋಗ ವ || ಘಾಟ ಮಾರಣವೆಂಬ ವೇಶ್ಯಾ | ವಾಟದತುಳಪ್ರೌಢಿಯನು ಕಂಡನು ಮಹೀಪಾಲ || ೩೦ ೩೦ - ಲಾಲಿತವ ಗಣಿಕಾಲಯದೊಳೊ | ಡೈಲಗಂಗೊಟ್ಟಂಗಜನು ಕೀ | ರಾಳಿಯೋದಲು ಬಂದು ಹುಗುವಜನಾಸ್ಯದಲಿ ಹರಿಯ || ಲೋಲವಕ್ಷದಿ ಸುರಪನಂಗದಿ | ಶೂಲಪಾಣಿಯ ಶಿರದಿ ಕಲೆಗಳ | ಜಾಲದಲಿ ನೋಡಿಸುವ ಶದೀಪಿಕೆಯ ಬೆಳಗಿನಲಿ | ೩೧ ಕುಸುಮಕೋದಂಡನು ಮನ್ನ ಥ | ನೆಸಗಿ ಜೇವೊಡೆದಂತೆ ಜಘನದೊ | ಳೆಸೆವ ಮಣಿಮಯಮೇಖಲಾಂಕಿತಘಂಟೆ ಘಮ್ಮೆ ನಲು || ಬಿಸರುಹಾನನೆಯೊರ್ವಳ್ಳೆ ತಂ | ದಸಮಶರನಂಗನೆಯವೊಲು ರಂ | ಜೆಸಿ ವಿಳಾಸದಿ ನಿಂದಳೊತ್ತೆಗೆ ಮನೆಯ ಬಾಗಿಲಲಿ || - ಇಟ್ಟ ನವಚಂದನದ ಚಿಟ್ಟಳ | [ವಟ್ಟಿರಲು] ಪೂಣ್ಣೆಣ್ಣೆಗಂಟಿನ | ತೊಟ್ಟಿ ಅವಕೆಯ ಮುತ್ತಿನೆಚ್ಚರಕಂದವೊಂದಿಸುತ | ಗಟ್ಟಿಕುಚ ನಸುದೋರುವಂದದೊ | ಭಟ್ಟಿ ಸಾಲೆಯು ಮೇಲುದೊಪ್ಪಿರೆ | ದಿಟ್ಟೆಯೋರ್ವಳು ನಿಂದಳಂಗಜನಲಗಿನಂದದಲಿ || ಬಈ ೩೬