ಪುಟ:ಜೀವಂಧರ ಚರಿತೆ.djvu/೨೦೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೯೪ ಭಾಸ್ಕರಕವಿರಚಿತ ಇತ್ತುದೊಂದರೆಕಾಸು ಬಿಡದುದ | ಯಾಸ್ತಮಾನವು ಕದಲನಿವನೇಂ | ಸತ್ತನೋ ಮೇಣ್ ದೈವ ಸೋಕಿತೋ ಬ್ರಹ್ಮ ರಾಕ್ಷಸನು || ತುತ್ತಿದನೊ ನೆಲಕಿಳಿದನೋ ಸುತೆ || ಗೆ ಬಂದುದು ಮಾರಿ ಕೆಟ್ಟೆನೆ | ನುತ್ತ ಮೊರೆಯಿಡುತಿರ್ಪ ಮುದುಗುಂಟಿಣಿಯನೀಕ್ಷಿಸಿದ || ೬೪ - ಸುಡುಸುಡೆಲೆ ಮುದುದೊತ್ತೆ ಸೌಖ್ಯವ | ಕಡಿವ ಕೊಡಲಿ ಕಠೋರೆ ಖಳೆ ಹೆ || ಡ್ಕೊಡನೆ ಹುಟ್ಟಿದ ನೀಚೆ ಚಿಕ್ಕಂದರಳ ನರದಿಂದ | ಬಿಡದೆ ಬಾಯುಂಟೆಂದು ಬೂತು | ಗೌಡಿಸುತಿಹೆ ಮಾಣೆಂದು ಜನನಿಯ | ಜಡಿದು ನುಡಿವ ಲತಾಂಗಿಯರ ನಗುತರಸನೀಕಿಸಿದ || ೬೫ ತರುಣಿ ಷದೊಳಪರಮುಖವಾ | ಗಿರಲು ನಿನ್ನ ಕುಚಾಸ್ಯ ವೀಕ್ಷಿಸಿ | ನೆರೆಯಲೆನ್ನ ಯ ಕಂಗಳೆಂದೆಂದೆಸಗೆ ನಿನ್ನ ಕಟಿ || ತುಳುಬು ಸಾಲದೆ ಸುರನದಿಯ ತಡಿ | ಯೆರಡಕುಂಟೆ ವಿಭೇದವೆಂದಡಿ | ಗೆಲಗಿ ತಿಳುಹುವ ವಿಟನನವನೀಪಾಲನೀಕ್ಷಿಸಿದ || ಅಳಿಯು ಸಲೆ ಪೂಗಾಶ್ವಶುಕ ಕೋ | ಕಿಛಲತಾವೀಣಾಶ್ರು ಫಣಿ ಸ | ಜಳಜ ಕಂಬು ಪತಿವ್ರತಾಸುರಚಾಪ ಸೊಡರಕ್ಕೆ | ಬಲೆ ಜಿಗುಳೆ ಕಿಚೆರಳೆ ಸೋಗೆಗೆ | ತಳಗನಂ ಮಧುವಂಚೆ ಹಂಸಾ || ವಳಿಯ ಹೊತ್ತಿರು ಮಗಳೆ ನೀನೆಂದೊರ್ವಳುಹಿದಳು | ೬೭ - ಒಬ್ಬನೊಳು ಮಾತಾಡುತೊಬ್ಬಗೆ | ಹುಬ್ಬಹಾಯ್ದು ತ ಕೆಲೆಯುತೊಬ್ಬನ | ನುಬ್ಬಿಸುತ ಮತ್ತೊಬ್ಬನೊಳು ನಗುತೊಬ್ಬರೊಲವೆಸಗಿ || ಒಬ್ಬ ಬರಿಬ್ಬರ ನಿರೀಕ್ಷಿಸ | ಲೊಬ್ಬನಿವಳೆನಗೊಲಿದಳೆಂದುಲಿ | ದುಬ್ಬುತಿರ್ದಳು ವಿಟವಿದಗ್ಗೆಯದೊರ್ವಳಿರುಳಿನಲಿ || ೬೮