ಪುಟ:ಜೀವಂಧರ ಚರಿತೆ.djvu/೨೦೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಜೀವಂಧರ ಚರಿತ ೧೯ ಇದು ವಿನಮದಮರೇಂದ್ರ ಶ್ರೀಚೆನ | ಪದಕಮಲಷಟ್ಟರಣ ವಾಣೀ || ವದನದರ್ಪಣ ಭೂಸುರೋತ್ತಮ ಬಸವಣಾಂಕಸುತ || ಚದುರ ಭಾಸ್ಕರರಚಿತ ಧರ್ಮ | ಪ್ರದನ ಜೀವಂಧರನ ಚರಿತೆಯೊ | ಆದುವೆ ಪುರ ರಾತ್ರೀವಿಹಾರಣವರಸ ಕೇಳೆಂದ || ಹದಿನೇಳನೆಯ ಸಂಧಿ ಮುಗಿದುದು. ಹದಿನೆಂಟನೆಯ ಸಂಧಿ ೮೯ ಸೂಚನೆ ಕ್ಷಿತಿಯನತಿ ವೈರಾಗ್ಯದಿಂದವೆ | ಸುತ ವಸುಂಧರಗಿತ್ತು ತಪದು | «ತದಿ ಜೀವಂಧರನು ಪಡೆದನು ಮೋಕ್ಷಸಂಪದವ || ಧರಣಿಪತಿ ಕೇಳಿಂತು ಜೀವಂ | ಧರನು ಸಕಲಮಹೀತಳವ ಸ | ಚರಿತದಿಂ ಪಾಲಿಸುತ ಮಹಿಳೆಹೊಕ್ಕವರ ಮನ್ನಿ ಸುತ | ಎಂಗಿದವರಿಂಗಭಿಮತವನಿ | ತರಿಗಳನು ಸಂಹರಿಸುತ ನಿರ್ಭಯ | ಕರದಿ ರಾಜ್ಯವನ್ನಾಳಿದನು ಹಲಕಾಲವೊಲವಿನಲಿ | - ಖ್ಯಾತಿಯಲಿ ರಘುರಾಮನನು ನಯ | ನೀತಿಯಲಿ ಭರತನನು ಸಿದ್ಧ || ರ್ಮಾತಿಶಯದಲಿ ಧರ್ಮಜನ ವಿಕ್ರಮದೊಳರ್ಜುನನ | ನೂತನಾಕಾರದಲ್ಲಿ ಮದನನ | ವೀತರಾಗನ ಭಕ್ತಿಯಲಿ ಪುರು | ಹೂತನನು ಪೋಿಂತು ಜೀವಂಧರನು ರಂಜಿಸಿದ | ಆ ಹುಸಿ ಕಪಟ ಕುಲಧರ್ಮವನು ಬಿ | ಟೈಸಗುವಣ ಪಾದರ ಪರಸ್ತ್ರೀ | ವ್ಯಸನವತ್ಯಾಸ್ವಾದವಾತ್ಮ ಸ್ತುತಿ ಸುರಾಪಾನ | ನುಸುಳು ಹಿಂಸೆ ಮಹಾಕಲುಷ ಕ | ರ್ಕಶವಚನ ಬಕವೃತ್ತಿ ಮಧುದು || ರ್ವ್ಯಸನವಿಲ್ಲಾ ನೃಪನ ಕಾಲದೊಳರಸ ಕೇಳೆಂದ ||