ಪುಟ:ಜೀವಂಧರ ಚರಿತೆ.djvu/೨೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಜೀವಂಧರ ಚರಿತ ೧೯ ೩೮ ೩೯ ದಾನಿಗಳನಚಲಿತರ ವಿಮಲ | ಜ್ಞಾನಿಗಳನುತ್ತಮರ ನಯಸ | ನ್ಯಾನಿಗಳ ಮದನ೬ನುರೂಪರ ಸರಸಕೋವಿದರ | ಭೂನುತರಸುಜ್ಜಲರನಮಲಗು | ಣಾನುರಕ್ತರ ಧಾರ್ಮಿಕರನವ | ಧಾನಿಗಳನಲ್ಲದೆ ಪುರಾಂತದಿ ಕಾಣೆ ನಾನೆಂದ || ವರಸಮುದ್ರದ ನಡುವೆ ಮೆಲುತಿವುರು | ತರದ ವಜ್ರದ ವೇದಿಕೆಯವೊಲು | ಪುರದ ಮಧ್ಯದ ಮಣಿಮಯದ ಹೊಂಗೋಂಟಿ ರಂಜಿಸಲು | ಸುರಗಿರಿಯ ಮೇಲತುಳಗಿರಿಗಳ | ನಿರಿಸಿದಂದದಿ ಕನಕಮಯದು | ಸ್ಪರಿಗೆಗಳು ರಂಜಿಸಿತು ಗೋಪುರವರಸ ಕೇಳೆಂದ || - ಕನಕದಲಿ ಸಮೆದಖಿಳಸಚಿವರ | ಮನೆಗಳಿರೆ ಶಸ್ಸಭಶಾಲಾ | ಎನುತಹಯಮಂದಿರಗಳೆಂದರಸಿಯರ ಮಣಿಮಯದ || ಘನವೆನಿಪ ಹರ್ಮಾಳಿ ದೇವಾ | ರ್ಚನೆಯ ಗೃಹ ಮಣಿಮಂಟಪೋದ್ಯ | ಡ್ರನಗಳಿಂದರಮನೆ ವಿರಾಜಿಸಿತಬಿಳವಿಭವದಲಿ || ಆಮಹಾಮಂದಿರದೊಳವನೀ || ಭಾಮಿನೀಸುಪ್ರೇಮ ರಾಜಲ | ಲಾಮ ವಿದ್ಯಾಸೀಮ ವರವಿತರಣಗುಣಾರಾಮ || ಕಾಮರೂಪ ಕಳಾಭಿರಾಮ ಮ | ಹಾಮಹಿಮ ಗುಣಧಾಮ ಜಯಸಂ | ಗ್ರಾಮನೊಲವಿಂದಿರ್ದ ಸತ್ಯಂಧರಮಹೀಪಾಲ || ತನುರುಚಿಯ ಮುಂದಿನನ ರುಚಿ ಕ | ಸ್ಪನುಪಮಾಕಾರದಲಿ ಹೃಜ್ಞಾ | ತನು ಕುರೂಪನು ಶಾಂತದಲಿ ಶಶಿ ಬಿಸಿ ಗಭೀರದಲಿ || ವನಧಿ ತೆಳ್ಳನೆ ಸತ್ಯದಲಿ ಧ || ರ್ಮನು ಹುಸಿಕನತಿರೋಷದಲಿ ತ | ಣ್ಣನೆ ದವಾನಳನೆಂದೊಡರಸನ ಪೊಗವ್ವನಾರೆಂದ || ೪೦ ೪ ೪೨