ಪುಟ:ಜೀವಂಧರ ಚರಿತೆ.djvu/೩೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೫೩ ೫೪ ಭಾಸ್ಕಂಕವಿರಚಿತ ಕ್ರೋಣಪತಿ ಕೆಳಮಹೀಶನ | ರಾಣಿಯನು ಪ್ರೋತ್ತುಂಗಪಳಿನ | ಶೋಣಿಯನು ರಕಾಬ ಪಲ್ಲವಪಾಣಿಯನು ಬರ್ಹಿ || ವೇಣಿಯನು ಜಾಣೆಯನು ವೀಣಾ | ವಾಣಿಯನು ಸೌಭಾಗ್ಯವಿಜಿತೇಂ | ದ್ರಾಣಿಯನು ವರ್ಣಿಸುವನಾರವನೀಶ ಕೇಳೆಂದ || - ನುತ ಸೊಬಗು ಸುಪತಿವ್ರತಾಗುಣ | ದತಿಶಯದಲಾಕಾರದಲಿ ಸು | ವ್ರತದಿ ಸೌಭಾಗ್ಯದ ಸುಲಕ್ಷಣದಲಿ ಸುಶೀಲದಲಿ || ಚತುರತೆಯೊಳನುನಯದಿ ಲೋಕದ | ಸತಿಯರನು ಗೆಲಿದುದರಿವಿಜಯಾ | ವತಿಯೆನಿಸ ಪೆಸರಾದುದಾಸತಿಗರಸ ಕೇಳೆಂದ || ಗುಣಿಯನಬಲಾಮಣಿಯ ಮುನಿಪೆ | ಸೃಣಿಯನಂಗಜ ಕುಣಿಸುತಿರ್ಪರ | ಗಿಣಿಯ ಕುಮುದೇಕ್ಷಣೆಯ ಶುಭಲಕ್ಷಣೆಯ ರೂಪಕದ | ಕಣಿಯ ಸಕಲಜನರ ಮನೋಹಾ | ರಿಣಿಯ ಪಲ್ಲವಪಾಣಿಯ ವಿಚಾ | ರಿಣಿಯ ಚಿಂತಾಮಣಿಯ ರೂಪನು ಪೊಗಳ್ಳಿನಾರೆಂದ | ೫೫ ಬಾಲೆಯನು ಮನಸಿಜನ ಶಸ್ಯದ | ಶಾಲೆಯನು ಚಾರಿತ್ರಗುಣಮಣಿ | ಮಾಲೆಯನು ಶೃಂಗಾರರಸಪೂರಿತಮಹಾಂಬುಧಿಯ || ವೇಲೆಯನು ರತಿಪತಿಯ ಮಂಗಳ | ಲೀಲೆಯನು ಖಂಡೇ೦ದುಸನ್ನಿ ಭ || ಭಾಳೆಯ: ನುತಶೀಲೆಯನು ವರ್ಣಿಸುವನಾರೆಂದ || ಈ ನಾರಿಯನು ಸತ್ಯಂಧರಮನೋ | ಹಾರಿಯನು ನಾಕಪ್ರಸುಖಸಾ | ಕಾರೆಯನು ಧೀರೆಯನು ನವಲಾವಣ್ಯವಾರಿಧಿಯ || ಏಶಿಯನು ಮುನಿನಿಕರಧೀರಸ | ಹಾರಿಯನುದಾರೆಯನು ವಿಗತವಿ | ಕಾರೆಯನು ವರ್ಣಿಸುವನಾರವನೀಶ ಕೇಳೆಂದ | ೫೭ ೫೬