ಪುಟ:ಜೀವಂಧರ ಚರಿತೆ.djvu/೩೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಜೀವಂಧು ಚರಿತ ೨೫ ಇದು ವಿನಮದಮರೇಂದ್ರ ಶ್ರೀಚಿನ | ಪದಕಮಲಷಟ್ಟರಣವಾಣೀ | ವದನದರ್ಪಣ ಭೂಸುರೋತ್ತಮ ಬಸವಣಾಂಕಸುತ | ಚದುರ ಭಾಸ್ಕರರಚಿತ ಧರ್ಮ | ಪ್ರದನ ಜೀವಂಧರನ ಚರಿತೆಯೊ | ಆದುವೆ ತಾನಧಿರಾಜವರ್ಣನವರಸ ಕೇಳೆಂದ || ೬೮ ಎರಡನೆಯ ಸಂಧಿ ಮುಗಿದುದು. ಮೂಕನೆಯ ಸಂಧಿ ಸಚನೆ|| ದುರುಳಕಾಷ್ಠಾಂಗಾರಕನ ಹವ || ಇದು ಸತ್ಯಂಧರನು ಮಂತ್ರಿ | ಶೈರನ ಮಾಡಿದ ತ ನ ವಿವರಿಸಿದನು ಮುನೀಶ್ವರನು | ಧರಣಿಪತಿ ಕೇಳೀಪ್ರಕಾರದಿ | ವರಕೃಪಾಗ್ರಣಿಯೆನಿಪ ಸತ್ಯಂ | ಧರನಕಾರಣದಿಂದ ಪೂರ್ವದ ಮಂತ್ರಿವರ್ಗಗಳ | ತೋರೆದು ಕಾಷ್ಠಾಂಗಾರಕನ ವಿ | ಸರದಿ ಸಚಿವನ ಮಾಡಿ ತಾ ಸುರ | ಪುರಕೆ ಸರಿದನು ಕುಜನಸಂಗದೊಳುಂಟೆ ಸುಖವೆಂದ || ೧ ಎನಲು ಮಗಧವೃಪಾಲ ಗೌತಮ | ಮುನಿಗೆ ತಾನಿಂತೆಂದ ಪರಿಣತ | ನೆನಿಪ ಸತ್ಯಂಧರನು ಕಾಷ್ಠಾಂಗಾರನೆಂಬವಗೆ || ಅನುಚಿತದಿ ಮಂತ್ರೀಶಪಟ್ಟವ | ನನುಕರಿಸಿ ಪಾಲಿಸಿದನೇಕಾ | ತನ ಸುವೃತ್ತಾಂತವನು ತಿಳುಹೆನೆ ಮುನಿಸನಿಂತಂದ | - ೨