ಪುಟ:ಜೀವಂಧರ ಚರಿತೆ.djvu/೪೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಭಾಸ್ಕರಕವಿರಚಿತ ನಾಲ್ಕನೆಯ ಸಂಧಿ ೧ ಸೂಚನೆ: ಧರಣಿಯನು ಮಂತ್ರಿಗಳು ಬೇಡೆನ | ಲಿರದೆ ಕಾಷ್ಠಾಂಗಾರಗಿತ್ತಾ | ದುರುಳನಿಂದೈದಿದನು ಸತ್ಯಂಧರನು ಸುರಪುರವ || ಧರಣಿಪತಿ ಕೇಳಿಂತು ಸತ್ಯಂ | ಧರನ್ನ ಪತಿ ರಾಜ್ಯಾಂಗನೆಯನಪ | ಹರಿಸಿ ಸತಿಯ ಕುಚಂಗಳನು ಗಿರಿದುರ್ಗವೆಂದೆನಿಪ || ಕುರುಳುಗಳ ವನದುರ್ಗವೆಂದುರು | ತರದ ಲಾವಣ್ಯಾಂಬು ಜಲಸಂ | ಸ್ಟುರಿತದುರ್ಗವಿದೆಂದು ಪಾಲಿಸುತಿರ್ದನೊಲವಿನಲಿ || ಧರಣಿಯೊಳಗತ್ಯಂತವಿಷಯಾ | ತುರರಿಗಾಯುರ್ನಷ್ಟವಬಿಳ್ಳೆ | ಶ್ವರಿಯವೋಸರಿಪುದು ಕೀರ್ತ್ಯ೦ಗನೆಗೆ ಕೇಡಹುದು || ಗರುವತನ ಹಿಂಗುವುದು ಧೈರ್ಯದ | ಶರಧಿ ನೆಲ ಬತ್ತುವುದು ಕುಲ ಪೈ | ಸರಿಸುವುದು ಸಂದೇಹವಿಲ್ಲದಕರಸ ಕೇಳೆಂದ || ಸತತವಿಷಯಾಸಕ್ತನವ ಸು | ವ್ರತವನುಲ್ಲಂಘಿಸುವ ಮಾನ | ಚ್ಯುತಿಗಳುಕ ಪರಧನಕೆ ಹೇಸನಭಿಜ್ಞತೆಯ ಬಿಡುವ | ವಿತತಧರ್ಮಾಚಾರವುಳಿದು | ದೃತಿಬಡುವ ಮುಂಗಾಣನವನೀ | ಕ್ಷಿತಿಯೊಳಗೆ ಹಗೆಯಾಗಿಹನು ಭೂಪಾಲ ಕೇಳೆಂದ || - ಭೂವರನೆ ಕೇಳ್ ವಿಷಯವಶದಿಂ | ರಾವಣನು ಹತವಾದನಶ್ವ | ಗ್ರೀವನಪಗತನಾದನಾಕೀಚಕನು ಮೃತನಾದ | ದೇವಸತಿ ನಿಂದ್ಯಾತ್ಮನಾದುದ | ಕೋವಿ ಕಂಡೀವಿಷಯದೊಳಗಹು | ದೇವದನುನಯವೀನೃಪಗೆ ಭೂಪಾಲ ಕೇಳೆಂದ ||